ಅಸ್ತಮಾ ತಪ್ಪು ಕಲ್ಪನೆಗಳ ಬಹಿರಂಗಪಡಿಸುವುದು ಎಂಬುದಾಗಿದೆ. ಜನರು ಅಸ್ತಮಾ ಕಾಯಿಲೆಯ ಬಗ್ಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳುವ ಬದಲು ಜಾಗೃತಿ ವಹಿಸಬೇಕಾಗಿದೆ.
ಎದೆಯಲ್ಲಿ ಬಿಗಿತ, ಉಸಿರಾಡಲು ಕಷ್ಟವಾಗುವುದು. ಪದೇ ಪದೇ ಬರುವ ಕೆಮ್ಮು ಒಂದು ರೀತಿಯ ಉಸಿರುಗಟ್ಟಿದಂತೆ ಅನಿಸುವುದು ಇವು ಅಸ್ತಮಾ ಕಾಯಿಲೆಯ ಲಕ್ಷಣಗಳಾಗಿವೆ. ಆರಂಭಿಕ ಹಂತದಲ್ಲಿ ಮಾರಣಾಂತಿಕವಲ್ಲದಿದ್ದರೂ ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಮಾರಕವಾಗುವ ಕಾಯಿಲೆ ಇದಾಗಿದೆ.ಅಸ್ತಮಾವನ್ನು ಪೂರ್ತಿಯಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದರ ಪರಿಣಾಮಗಳನ್ನು ಮತ್ತು ಲಕ್ಷಣಗಳನ್ನು ಕಡಿಮೆಗೊಳಿಸಬಹುದು, ಕೆಲವರಿಗೆ ಬಾಲ್ಯದಲ್ಲಿ, ಇನ್ನು ಕೆಲವರಿಗೆ ವಯಸ್ಕರಾದ ನಂತರ ಈ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಈ ಕಾಯಿಲೆ ಲಕ್ಷಣಗಳು ಹೆಚ್ಚಿನ ಅರಿವು ಮೂಡಿಸಲು ರೋಗ ನಿವಾರಣೆಗೆ ಇರುವ ಔಷಧ ಚಿಕಿತ್ಸಾ ಪದ್ಧತಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಪ್ರತಿವರ್ಷ ಮೇ-4 ರಂದು ವಿಶ್ವ ಅಸ್ತಮಾ ದಿನಾಚರಣೆಯನ್ನು ಆಚರಿಸಲಾಗುವುದು.
ವಿಶ್ವದಾದ್ಯಂತ ಅಸ್ತಮಾ ರೋಗದ ಬಗ್ಗೆ ಅಪನಂಬಿಕೆ ಹೋಗಲಾಡಿಸಿ, ರೋಗದ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸ್ಥೈರ್ಯವನ್ನು ನೀಡುವ ಸದುದ್ಧೇಶ ಈ ಆಚರಣೆ ಹಿನ್ನೆಲೆಯಾಗಿದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆ ಉಂಟು ಮಾಡುತ್ತದೆ.
ಅಸ್ತಮಾ ರೋಗದ ಲಕ್ಷಣಗಳು:
1. ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದು ಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.
2. ಎದೆ ಬಿಗಿ ಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು.
3. ವಿಪರೀತ ದೀರ್ಘಕಾಲಿಕ ಕೆಮ್ಮು.
4. ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ, ಅಶಕ್ತಿ ಮತ್ತು ಅಸಹನೆ ನಿರುತ್ಸಾಹ. ಆಟೋಟ ಮತ್ತು ಇತರೆ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.
ಅಸ್ತಮಾ ತಡೆಗಟ್ಟುವುದು ಹೇಗೆ ?
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾ ರೋಗಕ್ಕೆ ತುತ್ತಾಗುತ್ತಾರೆ ಎಂಬುದನ್ನು ಅರಿತು ಅಲರ್ಜಿಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು ಉದಾ: ಧೂಳು, ಧೂಮಪಾನದ ಹೊಗೆ, ಅಸ್ಪರಿನ್ ಮುಂತಾದ ನೋವು ನಿವಾರಕ ಔಷಧಿಗಳು, ಸಾಕು ಪ್ರಾಣಿಗಳ ರೋಮ, ಅಲರ್ಜಿಕಾರಕ ಆಹಾರ ಪದಾರ್ಥಗಳು ಚಾಕೋಲೇಟ್ ಇತ್ಯಾದಿ ಜೀವನ ಶೈಲಿಯ ಪರಿವರ್ತನೆಗೆ
ಹೆಚ್ಚಿನ ಒತ್ತು ನೀಡಿ ವಾತಾವರಣದಲ್ಲಿನ ಅಲರ್ಜಿಕಾರಕ ವಸ್ತುಗಳು ಅಥವಾ ರಾಸಾಯನಿಕಗಳ ಸಂಪರ್ಕಕ್ಕೆ ಬಾರದಂತೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ.
ಪ್ರತಿವರ್ಷವು ವಿಶ್ವ ಅಸ್ತಮಾ ದಿನದಂದು ಧ್ಯೇಯ ವಾಕ್ಯವನ್ನು ಘೋಷಿಸಿ ಜನರಿಗೆ ಜಾಗೃತಿ ಮೂಡಿಸಲಾಗಿರುತ್ತದೆ. ಅದರಂತೆ 2021 ನೇ ವರ್ಷದ ಧ್ಯೇಯ ವಾಕ್ಯ Uncovering Asthma
Misconceptions ಕನ್ನಡ ಭಾಷಾರ್ಥ ಅಸ್ತಮಾ ತಪ್ಪು ಕಲ್ಪನೆಗಳ ಬಹಿರಂಗಪಡಿಸುವುದು ಎಂಬುದಾಗಿದೆ. ಜನರು ಅಸ್ತಮಾ ಕಾಯಿಲೆಯ ಬಗ್ಗೆ ತಪ್ಪು
ಕಲ್ಪನೆಗಳನ್ನು ಇಟ್ಟುಕೊಳ್ಳುವ ಬದಲು ಜಾಗೃತಿ ವಹಿಸಬೇಕಾಗಿದೆ.
ಎಸ್.ಮರಳಸಿದ್ದೇಶ್ವರ ಶಿವಪುರ
ಹೊಳಲ್ಕೆರೆ.
[email protected]