ಜ್ಞಾನ ಗಂಗೋತ್ರಿ ಎಂದೇ ಪ್ರಖ್ಶಾತಿ ಪಡೆದಿರುವ ಮಲಯಾಚಲ ತಪೋಭೂಮಿ ಸೃಷ್ಠಿ ಸೌಂದರ್ಯದ ಮಡಿಲು, ಆಕರ್ಷಕ ಪ್ರವಾಸಿ ತಾಣ ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವೆಂದರೆ ಸರ್ವರಿಗೂ ಅಚ್ಚು ಮೆಚ್ಚು.
ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಭೂಲೋಕದಲ್ಲಿ ಲೋಕ ಕಲ್ಶಾಣಕ್ಕಾಗಿ ತೆಲಂಗಾಣ ರಾಜ್ಶದ ಕೊಲನುಪಾಕ ಸುಕ್ಷೇತ್ರದ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿ, ಪುರಾಣ ಪ್ರಸಿದ್ಧ ಕುಂಭ ಸಂಭವ ಅಗಸ್ತ್ಶ ಮಹರ್ಷಿಗೆ ಶಿವಾಧ್ವೈತ ಸಿದ್ಧಾಂತ ತತ್ವವನ್ನು ಅರುಹಿದ ಈ ಪವಿತ್ರ ಪುಣ್ಶಭೂಮಿಯೇ ವೀರಶೈವ ಧರ್ಮದ ಅಧ್ಶಾತ್ಮ ಕೇಂದ್ರವಾಗಿ ನೆಲೆಗೊಂಡಿದೆ.
ದೇವಲೋಕದ ನಂದಾ ದೀಪಗಳಂತೆ ಕಂಗೊಳಿಸುವ ರಾಷ್ಟ್ರೀಯ ಗುರುಪೀಠಗಳಾದ ಪಂಚಪೀಠಗಳಲ್ಲಿ ಒಂದಾದ ಪ್ರಥಮ ಶ್ರೀ ರಂಭಾಪುರಿ ಮಹಾಪೀಠದ ಶ್ರೀಮಂತ ಗುರು ಪರಂಪರೆಯ ಇತಿಹಾಸದಲ್ಲಿ ವೀರ ತಪೋನಿಧಿಗಳು, ಶಿವಯೋಗಿಗಳು, ಪವಾಡ ಪುರುಷರು, ಪರಮಾಚಾರ್ಯರು ತಮ್ಮ ಪೀಠಾರೋಹಣದ ಅವಧಿಯಲ್ಲಿ ವೈಭವ ಮತ್ತು ಕೀರ್ತಿಯನ್ನು ಶ್ರೀಮಂತಗೊಳಿಸಿದ್ದಾರೆ.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ಶ್ರೀರಂಭಾಪುರಿ ಮಹಾಪೀಠದ ಘನತೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಕೀರ್ತಿ ಪ್ರಸ್ತುತ ಪೀಠದ ಒಡೆಯರಾದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಗೆ ಸಲ್ಲುತ್ತದೆ. ಸದಾ ಕ್ರಿಯಾಶೀಲರಾಗಿರುವ ಪರಮಪೂಜ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ದಿವ್ಶ ಸಂದೇಶವನ್ನು ಜಗತ್ತಿಗೇ ಸಾರಿದ ಶಿವಪೂಜಾ ದುರಂಧರ ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳವರ ಹಾಗೂ ಚತುರ್ಭಾಷಾ ವಿಶಾರದ ಲಿಂ. ಶ್ರೀ ವೀರ ರುದ್ರಮುನಿ ಜಗದ್ಗುರುಗಳವರ ಕೃಪಾಕಟಾಕ್ಷದ ಮೇರೆಗೆ ದಿನಾಂಕ 6.2.1992 ರಂದು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಸಾನ್ನಿಧ್ಶದಲ್ಲಿ ನಾಡಿನ ಹರ-ಗುರು-ಚರ ಮೂರ್ತಿಗಳವರ ಹಾಗೂ ಅಸಂಖ್ಶಾತ ಭಕ್ತ ಸ್ತೋಮದ ಮಧ್ಶದಲ್ಲಿ ಸ್ವಯಂಭೂ ಶ್ರೀ ಸೋಮೇಶ್ವರ ಮೂಲ ನಾಮಾಂಕಿತದೊಂದಿಗೆ ಪೀಠಾರೋಹಣ ಹೊಂದಿದವರಾಗಿದ್ದಾರೆ.
ಪರಮ ಪೂಜ್ಯರು ಹುಬ್ಬಳ್ಳಿ ತಾಲ್ಲೂಕಿನ ಹಳಿಯಾಳ ಗ್ರಾಮದ ಪ್ರಸಿದ್ಧ ಹಿರೇಮಠದ ವೇ.ಮೂ. ಶ್ರೀ ಚನ್ನಬಸವಾ ರ್ಯರು ಮತ್ತು ಸೌಭಾಗ್ಶವತಿ ಶ್ರೀಮತಿ ಚನ್ನಬಸವಾಂಬೆಯರ ಪುಣ್ಯ ಗರ್ಭದಲ್ಲಿ ದಿನಾಂಕ 7.1.1956 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹಳಿಯಾಳದಲ್ಲಿ, ಮಾಧ್ಶಮಿಕ ಶಿಕ್ಷಣ ಗದಗ ನಗರದಲ್ಲಿ, ಉನ್ನತ ಶಿಕ್ಷಣ ಬೆಂಗಳೂರಿನಲ್ಲಿ ಪೂರೈಸಿದರು. 20ನೇ ವಯಸ್ಸಿನಲ್ಲಿ ಹಳಿಯಾಳ – ಹಳೇ ಹುಬ್ಬಳ್ಳಿ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷರಾಗಿ ನಂತರ 1985 ರಲ್ಲಿ ಇತಿಹಾಸ ಪ್ರಸಿದ್ಧ ಶಿವಗಂಗಾ ಕ್ಷೇತ್ರದ ಮೇಲಣ ಗವಿ ಮಠದ ಪಟ್ಟಾಧ್ಶಕ್ಷರಾಗಿ ಅಮೋಘ ಸೇವೆ ಸಲ್ಲಿಸಿದರು.
ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಗಳೆಂದರೆ ಅವರೊಬ್ಬ ನಡೆದಾಡುವ ದೇವರಾಗಿದ್ದು, ಸರ್ವ ಭಕ್ತರ ಹಿತವನ್ನು ಬಯಸುವ, ಸರ್ವ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಪರಶಿವ ಮೂರ್ತಿಗಳಾಗಿದ್ದಾರೆ. ಅವರ ಓಜಸ್ಸು, ತೇಜಸ್ಸುಗಳೇ ಪರಂಜ್ಯೋತಿ ಸ್ವರೂಪವಾಗಿದ್ದು, ಆ ದರ್ಶನದಲ್ಲಿ ನಮ್ಮ ಜೀವನ ದರ್ಶನವಾಗುತ್ತದೆ, ಅಲ್ಲದೇ ನಮ್ಮ ಗುರಿ ಗಮ್ಯಗಳ ಅರಿವಾಗುತ್ತದೆ. ಮಾತೃ ವಾತ್ಸಲ್ಯದ ಮಮತೆಯ ಕಡಲಾಗಿರುವ ಪೂಜ್ಯರು ನಕ್ಕರೆ ಅರಳಿದ ಕಮಲ ಪುಷ್ಪದಂತೆ ಸರಿ-ನುಡಿಯುವ ಮುತ್ತುಗಳು ಅಮೃತ ಧಾರೆ, ದಿವ್ಯ ಸಂದೇಶಗಳು ಜೀವನ ಪಾವನ ಹಾಗೂ ಸಾಕ್ಷಾತ್ಕಾರ. ಅವರು ಪಾದವಿಟ್ಟ ನೆಲ ಸುಕ್ಷೇತ್ರ ಜಲ ಪಾವನ ತೀರ್ಥವಾಗಿದೆ. ಲೋಕ ಕಲ್ಶಾಣ ಹಾಗೂ ವಿಶ್ವಶಾಂತಿಗಾಗಿ ಸಾಹಿತ್ಶ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಅಮೋಘ ಸಂದೇಶದ ಮೂಲಕ ಪ್ರತಿನಿತ್ಯ ನಾಡಿನಾದ್ಶಂತ ಸಂಚರಿಸಿ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭದ ಮೂಲಕ ಜಗವ ಜಾಗೃತಗೊಳಿಸುತ್ತಿರುವ ಧರ್ಮಧೂತರಾಗಿದ್ದಾರೆ.
ಪರಮ ಪೂಜ್ಶರ ಸಂಕಲ್ಪಗಳು ಕಾಮಧೇನು ಕಲ್ಪ ವೃಕ್ಷವಿದ್ದಂತೆ. ಅವರು ನುಡಿ ವೀರರಲ್ಲ, ನಡೆ ವೀರರು ಎಂಬುದನ್ನು ಹೇಳಿದ್ದಕ್ಕಿಂತ ಧುಮುಕಿ ಧುಮುಕಿ ಹರಿಯುವ ಜಲದಂತೆ, ಸಾಲು ಸಾಲು ಯೋಜನೆಗಳನ್ನು ಸಾಕಾರಗೊಳಿಸಿದ ಸಾಕಾರ ಮೂರ್ತಿ ಸಾಧನೆಯ ಸಹ್ಶಾದ್ರಿಯಾಗಿದ್ದಾರೆ. ಶ್ರೀ ಪೀಠದ ಪರಿಸರದಲ್ಲಿ ಹಾಗೂ ನಾಡಿನಾದ್ಯಂತ ಮಾಡಿರುವ ಮಹತ್ಕಾರ್ಯಗಳು ಸುವರ್ಣಾಕ್ಷರಗಳಲ್ಲಿ ದಾಖಲಿಸಲ್ಪಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಮೂಲ ಸುಕ್ಷೇತ್ರ ತೆಲಂಗಾಣದ ಕೊಲನುಪಾಕ ಸ್ವಯಂಭೂ ಶ್ರೀ ಸೋಮೇಶ್ವರ ದೇಗುಲದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟು ಹಲವಾರು ವರ್ಷದಿಂದ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.
ಶ್ರೀ ಪೀಠದ ಪರಿಸರದಲ್ಲಿ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ಶಿಲಾ ಮಂಗಲ ಮೂರ್ತಿ ಕಾರ್ಯಕ್ಕೆ ಚಾಲನೆ ನೀಡಿ ಭರದಿಂದ ಸಾಗಿದೆ. ನಾಡಿನಾದ್ಯಂತ ಭಕ್ತರ ಅನುಕೂಲಕ್ಕೆ ಭವ್ಯ ಮಂಗಲ ಮಂಟಪಗಳು, ಹಲವು ವಿದ್ಯಾಲಯಗಳು ತಲೆ ಎತ್ತಿ ನಿಂತಿವೆ. ಧರ್ಮ ಪರಂಪರೆ ರಕ್ಷಣೆಗಾಗಿ ಉತ್ಕೃಷ್ಟ ಗ್ರಂಥಗಳು, ಕೃತಿಗಳು, ವೀರಶೈವ ಧರ್ಮ ಗ್ರಂಥ ಸಿದ್ಧಾಂತ ಶಿಖಾಮಣಿ ಭಕ್ತಿಯ ಧ್ವನಿ ಸುರುಳಿಗಳು ಹೆಮ್ಮೆಯ ಮಾಸ ಪತ್ರಿಕೆ ರಂಭಾಪುರಿ ಬೆಳಗು ಬಿಡುಗಡೆ ಅಲ್ಲದೇ ಸಾಕ್ಷ್ಶ ಚಿತ್ರ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಾತ್ಮೆಯ ಚಲನ ಚಿತ್ರ ಬಿಡುಗಡೆ ಗೊಳಿಸಿದ ದಿವ್ಶಾತ್ಮರಾಗಿದ್ದಾರೆ.
ಪರಮ ಪೂಜ್ಯ ಮಹಾಸನ್ನಿಧಿಯವರ ಕರ್ತೃತ್ವ ಶಕ್ತಿಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಶಾಲಯ ದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಅವಿಸ್ಮರಣೀಯ. ಸಾಹಿತ್ಶ ಪ್ರೇಮಿಗಳಾಗಿರುವ ಪೂಜ್ಯರು ಕನ್ನಡ ಸಾಹಿತ್ಶ ಪರಿಷತ್ತಿನಲ್ಲಿ ದತ್ತಿಯನ್ನು ಸ್ಥಾಪಿಸಿ ಸಾಹಿತ್ಶ ಪ್ರೇಮ ಮೆರೆದಿದ್ದಾರೆ.
ವೀರಶೈವ ಧರ್ಮದ ಮೂಲ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ ಪರಂಪರೆ ರಕ್ಷಕರಾಗಿ ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆಯನ್ನೇ ಕೈಗೊಂಡಿರುವ ಮಹಾಸನ್ನಿಧಿ ಯವರು 68 ಸಾರ್ಥಕ ವಸಂತಗಳನ್ನು ಕಳೆದು 69ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪೂಜ್ಯರು ದಿನಾಂಕ 7.1.2025 ರಂದು ತೆಲಂಗಾಣದ ಕೊಲನುಪಾಕ ಸುಕ್ಷೇತ್ರ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಅವತರಿಸಿದ ಸ್ವಯಂಭು ಶ್ರೀ ಸೋಮೇಶ್ವರ ದೇಗುಲದ ಪ್ರಾಂಗಣ ದಲ್ಲಿ ಜನ್ಮ ದಿನೋತ್ಸವ ಹಾಗೂ ವೀರ ಶೈವ ಸಂಸ್ಕೃತಿ ಸಂವರ್ಧನಾ ಸಮಾ ರಂಭವು ಸಂಭ್ರಮದಿಂದ ಜರುಗಲಿದೆ.
– ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ, ಚಿರಸ್ತಹಳ್ಳಿ – ಹರಪನಹಳ್ಳಿ.