ದಾವಣಗೆರೆ, ಫೆ. 23-ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ, ಸುಕ್ಷೇಮ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಲ್ಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರವು ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ನಡೆಯಿತು. ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ಅಧ್ಯಕ್ಷ ಸಿ.ಕೆ. ರಂಗಪ್ಪ, ಡಾ|| ಹಾಲಸ್ವಾಮಿ ಕಂಬಾಳಿಮಠ, ರೋಷನ್ ರೇವಣಕರ್, ಪಿ.ಬಿ. ಪ್ರಕಾಶ್ ಭಾಗವಹಿಸಿದ್ದರು.
December 23, 2024