ದಾವಣಗೆರೆ, ನ.7- ಮಹಾನಗರ ಪಾಲಿಕೆಯ ಘನತ್ಯಾಜ್ಯ ವಸ್ತುಗಳ ಸಂಸ್ಕ ರಣಾ ಘಟಕಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿ, ಕಸ ವಿಲೇವಾರಿ ಬಗ್ಗೆ ನಗರ ಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ಮಾಹಿತಿ ಪಡೆದರು. ಸಂಸ್ಕರಣಾ ಘಟಕದಲ್ಲಿರುವ ಸುಮಾರು ಐದು ಲಕ್ಷ ಟನ್ ಕಸವನ್ನು ಗೊಬ್ಬರ ವಾಗಿ ತಯಾರಿಸಿ ವಿಲೇವಾರಿ ಮಾಡುವ ಕುರಿತು ಮತ್ತು ತ್ಯಾಜ್ಯದಿಂದ ಬರುವ ವಾಸನೆ ತಡೆಯುವ ಬಗ್ಗೆ ಕೆಲ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್, ಜಯಮ್ಮ ಗೋಪಿ ನಾಯ್ಕ್, ಪಾಲಿಕೆ ಸದಸ್ಯರಾದ ಸ್ವಾಗಿ ಶಾಂತ ಕುಮಾರ್, ಎಲ್.ಡಿ.ಗೋಣೆಪ್ಪ, ಮುಖಂಡರಾದ ನರೇಂದ್ರ ಕುಮಾರ್, ಯೋಗೀಶ್ (ಯಗ್ಗಪ್ಪ), ಜಯಪ್ರಕಾಶ್ ಸೇರಿದಂತೆ ಇತರರು ಇದ್ದರು.