ದಾವಣಗೆರೆ, ಜೂ. 23- ಮಡಿವಾಳ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರವಾಗಿ 5 ಸಾವಿರ ರೂಪಾಯಿಗಳ ನೆರವು ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಸಮಾಜದ ಯಾವುದೇ ವೃತ್ತಿಪರರು ಗೊಂದಲಕ್ಕೆ ಒಳಗಾಗದೇ ಸರ್ಕಾರದ ಮಾರ್ಗಸೂಚಿಯಂತೆ ಅರ್ಹರು ಅರ್ಜಿ ಸಲ್ಲಿಸುವಂತೆ ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ. ಉಮೇಶ್ ಸಲಹೆ ನೀಡಿದರು.
ವಿನೋಬ ನಗರದ ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಖಜಾಂಚಿ ಸುರೇಶ್ ಕೋಗುಂಡೆ, ಉಪಾಧ್ಯಕ್ಷ ಜಿ. ವಿಜಯಕುಮಾರ್, ಸಹ ಕಾರ್ಯದರ್ಶಿ ಆರ್.ಎನ್. ಧನಂಜಯ, ಬಿ. ಅಜಯ್, ಮಾಧ್ಯಮ ಸಲಹೆಗಾರ ಎಂ.ವೈ. ಸತೀಶ್, ವಕೀಲ ಅಜೇಯ್, ರವಿ ಚಿಕ್ಕಣ್ಣ, ಹೆಚ್. ದುಗ್ಗಪ್ಪ, ಕಿಶೋರ್ ಕುಮಾರ್, ಮಡಿಕಟ್ಟೆ ಸಮಿತಿಯ ಅಧ್ಯಕ್ಷ ಅಡಿವೆಪ್ಪ, ಕಾರ್ಯದರ್ಶಿ ಎಂ. ರವಿ, ಬಿ. ರವಿಕುಮಾರ್, ಸಿದ್ದೇಶ್, ನಿಂಗರಾಜ್, ಶಶಿಕುಮಾರ್, ಮಡಿವಾಳಪ್ಪ, ನಾಗರಾಜ್, ಹನುಮಂತಪ್ಪ, ಜಗದೀಶ್, ಷಣ್ಮುಖಪ್ಪ ಇನ್ನಿತರರಿದ್ದರು.