ದಾವಣಗೆರೆ, ಮಾ.29 – ಸುಭಿಕ್ಷಾ ಫೌಂಡೇಶನ್ ವತಿಯಿಂದ ಕೋವಿಡ್ 19 ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಎಸ್.ಪಿ. ಹನುಮಂತ ರಾಯ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು.
ತಾಲ್ಲೂಕು ರೈತ ಭವನದ ಬಳಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ 500 ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹನುಮಂತರಾಯ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಎರಡನೇ ಅಲೆ ವೇಗವಾಗಿ ಹರಡುತ್ತಿದೆ.
ಆರೋಗ್ಯ ವಿಚಾರದಲ್ಲಿ ಮರೆವು ಇರಬಾರದು, ಮಾಸ್ಕ್ ಹಾಕಿಕೊಂಡು ಬರದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಸ್ಪಿ ಜೊತೆ ಸಂಸ್ಥೆ ಕಾರ್ಯದರ್ಶಿ, ಸೌಮ್ಯ ಮಂಜುನಾಥ್ ಜಾಧವ್, ಶ್ರೀಮತಿ ಆಶಾ ಮರಿಯೋಜಿರಾವ್, ಭಾಗ್ಯ ಪಿಸಾಳೆ, ಶ್ವೇತಾ ಸೋಮಶೇಖರ್ ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.