ಹರಿಹರ, ಮಾ.25- ನಗರಸಭೆಯ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರದ ನಿರ್ದೇಶನದಂತೆ ಪಿ.ಬಿ. ರಸ್ತೆಯಲ್ಲಿರುವ ಮೋರ್ ಮತ್ತು ಜಿ-7 ಮಳಿಗೆಗಳಲ್ಲಿ ಮಾಸ್ಕ್ ಧರಿಸದೇ ಇರುವ ಸಂಬಂಧ ದಂಡ ವಿಧಿಸಲಾಯಿತು.
ನಗರಸಭೆಯ ಕಚೇರಿ ವ್ಯವಸ್ಥಾಪಕ ಜಿ.ಹೆಚ್. ವೀರಾಪುರ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಸಿ.ಹೆಚ್. ತಿಮ್ಮಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿ-7 ನಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಪತ್ತೆ ಹಚ್ಚಿ ರೈಡ್ ಮಾಡಲಾಯಿತು. ಜಯಶ್ರೀ ಚಿತ್ರಮಂದಿರದಲ್ಲಿ ಮಾಸ್ಕ್ ಧರಿಸದಿರುವ ಹಾಗೂ ಗುಟ್ಕಾ ಉಗುಳಿರುವುದನ್ನು ಪರಿಶೀಲಿಸಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಹಾಗೂ ಮಾಸ್ಕ್ ಕಡ್ಡಾಯ ಮಾಡುವಂತೆ ತಿಳಿಸಿ, ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕ ಹೆಚ್. ತಿಪ್ಪೇಸ್ವಾಮಿ, ಎ. ನಸರುಲ್ಲಾ, ದ್ವಿತೀಯ ದರ್ಜೆ ಸಹಾಯಕ ಬಿ.ಕೆ. ಅಸ್ಲಾಂ, ರಾಮಕುಮಾರ್ ಕೊಂಡಜ್ಜಿ, ಆರ್.ಎಂ. ವಿನಯಕುಮಾರ್ ಮತ್ತು ಎಸ್. ಮಂಜುನಾಥ್, ಎಸ್. ಉಷಾ, ಸೌಭಾಗ್ಯ, ದಫೇದಾರ್ ಹನುಮಂತ ಹಾಜರಿದ್ದರು.