ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ

ದಾವಣಗೆರೆ, ಮಾ.16- ಮಹಾ ಶಿವರಾತ್ರಿ ಪ್ರಯುಕ್ತ ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸುಗಮ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಜರುಗಿದವು.

ಮಹಾಪೌರ ಎಸ್‌.ಟಿ. ವೀರೇಶ್‌ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, 1996 ರಲ್ಲಿ ಆರಂಭವಾದ ಈ ದೇವಸ್ಥಾನ ದೊಡ್ಡ ಪ್ರಮಾಣ ದಲ್ಲಿ ಬೆಳೆದು ಇಡೀ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖ್ಯಾತಿ ಗಳಿಸಿದೆೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಧ್ಯಕ್ಷ ಬೆಳವನೂರು ನಾಗರಾಜಪ್ಪ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಈಶ್ವರ – ಪಾರ್ವತಿ – ಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬೆಳವನೂರು ನಾಗರಾಜಪ್ಪ, ಸದಸ್ಯರಾದ ಡಾ. ಹೆಚ್‌.ಎಸ್‌. ಮಂಜುನಾಥ ಕುರ್ಕಿ ಅವರು ಮಹಾಪೌರರಾದ ಎಸ್‌.ಟಿ. ವೀರೇಶ್‌ ಅವರನ್ನು ಗೌರವಿಸಿದರು.

ನಂತರ ಸುಗಮ ಸಂಗೀತ, ಭಜನೆ ಮತ್ತು ನಮನ ಅಕಾಡೆಮಿ ಸಂಸ್ಥಾಪಕರಾದ ಶ್ರೀಮತಿ ಮಾಧವಿ ಗೋಪಾಲಕೃಷ್ಣ ಮತ್ತು ತಂಡದವರು ನೃತ್ಯ  ಜಾಗರಣೆ, ಭರತ ನಾಟ್ಯ ಪ್ರದರ್ಶಿಸಿದರು.

error: Content is protected !!