ದಾವಣಗೆರೆ, ಮಾ.13- ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ 91ನೇ ಸ್ಮರಣ ದಿನದ ಅಂಗವಾಗಿ ಎಐಡಿಎಸ್ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರ ಸಮಿತಿ ಕಚೇರಿ ಮತ್ತು ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕವಾಗಿ ಕ್ರಾಂತಿಕಾರಿ ಚೇತನವನ್ನು ಸ್ಮರಿಸಲಾಯಿತು. ಸಂಘಟನೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾವ್ಯ ಆಜಾದ್ ಕುರಿತು ಮಾತನಾಡಿದರು. ಸಂಘಟನಾಕಾರರಾದ ಪುಷ್ಪ ಸೇರಿದಂತೆ ಸದಸ್ಯರನೇಕರು ಭಾಗವಹಿಸಿದ್ದರು.
January 1, 2025