ಕೊಂಡಜ್ಜಿಯಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕ ರಾಮಪ್ಪ ಚಾಲನೆ

ಕೊಂಡಜ್ಜಿ, ಮಾ.14 – ಕೊಂಡಜ್ಜಿ ಗ್ರಾಮದಲ್ಲಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸುಮಾರು 37 ಲಕ್ಷ ರೂ ಅನುದಾನದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಸ್‍.ರಾಮಪ್ಪ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ವಿಧಾನ ಪರಿಷತ್‍ ಸದಸ್ಯ ಮೋಹನ್‍ ಕುಮಾರ್‌ ಕೊಂಡಜ್ಜಿ ಅವರ ಮನವಿ ಮೇರೆಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ಬಸವರಾಜೇಂದ್ರ ಅವರು ಈ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್‍ ಕೊಂಡಜ್ಜಿ ಈ ವೇಳೆ ತಿಳಿಸಿದರು.

ತಾ.ಪಂ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಗ್ರಾ.ಪಂ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷೆ ಕರಿಬಸಮ್ಮ, ಸದಸ್ಯರಾದ ಶಿವಕುಮಾರ್‍, ರತ್ನಮ್ಮ, ನಿಂಗಪ್ಪ, ದಂಡೆಪ್ಪ, ಮರಿಯಮ್ಮ, ಚೆಲ್ಲೇಶ್‍ ಹಾಗೂ ಗ್ರಾಮಸ್ಥರು ಹಾಜರಿದ್ದರು.

error: Content is protected !!