ಚಿಂತನ ಚಾನಲ್‍ ವಾರ್ಷಿಕೋತ್ಸವ

ಹರಿಹರ, ಮಾ.14- ನಗರದ ಕೋಟೆ ಪ್ರದೇಶದಲ್ಲಿರುವ ಚಿಂತನ ಪ್ರತಿಷ್ಠಾನದ ಕಚೇರಿ ಮುಂಭಾಗ ಚಿಂತನ ಯೂಟ್ಯೂಬ್ ಚಾನಲ್‍ನ ಎರಡನೇ ವಾರ್ಷಿಕೋತ್ಸವ  ಆಚರಿಸಲಾಯಿತು.

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿದರು. ಚಿಂತನ ಪತ್ರಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಅಧ್ಯಕ್ಷತೆ ವಹಿಸಿದ್ದರು.  ಶ್ರೀ ಶಂಕರ ಸಂಗೀತ ಪಾಠಶಾಲೆಯ ಪ್ರಾಚಾರ್ಯೆ ಮಾಧುರಿ ಶೇಷಗಿರಿ, ವೀಣಾ ದೀಕ್ಷಿತ್, ಎನ್.ಬಿ. ಲೀಲಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಷಣ್ಮುಖ ದೇವರ ನಾಮಗಳನ್ನು ಹಾಡಿದರು. ಶ್ರೀ ಶಂಕರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಚಿಂತನ ಪ್ರತಿಷ್ಠಾನದ ಕಾರ್ಯದರ್ಶಿ ಡಿ. ಫ್ರಾನ್ಸಿಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!