ಕೂಡ್ಲಿಗಿ, ಮಾ.14- ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗಜಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ ಇದೆ. ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು. ಠಾಣೆಯಲ್ಲಿ ಜರುಗಿದ ದಲಿತರ ಸಭೆಯಲ್ಲಿ ಯುವ ಮುಖಂಡರಾದ ಸಾಲುಮನಿ ರಾಘವೇಂದ್ರ, ಮಾಜಿ ಸೈನಿಕ ರಮೇಶ್ ಹಾಗೂ ಡಿ.ಹೆಚ್.ದುರುಗೇಶ್ ಸಭೆಯಲ್ಲಿ ದೂರಿದರು.
ಸಿಪಿಐ ವಸಂತ ಅಸೋದೆ ಮಾತನಾಡಿ, ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶೀಘ್ರವೇ ಮುಂದಾಗುವುದಾಗಿ ಭರವಸೆ ನೀಡಿದರು.
ಡಿ.ಹೆಚ್.ದುರುಗೇಶ್, ಸಾಲುಮನಿ ರಾಘವೇಂದ್ರ ಮಾತನಾಡಿದರು. ಸಿಪಿಐ ವಸಂತ ಅಸೋದೆ, ಪಟ್ಟಣದ ಯುವ ದಲಿತ ಮುಖಂಡರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.