ದಾವಣಗೆರೆ, ಮಾ. 10– ನಗರದ ಡಿ.ಆರ್.ಆರ್. ಸರ್ಕಾರಿ ಪಾಲಿಟೆಕ್ನಿಕ್‌ನ ಕಮರ್ಷಿಯಲ್ ಪ್ರಾಕ್ಟೀಸ್ ಕನ್ನಡ ಹಾಗೂ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳು §ಜನತಾವಾಣಿ¬ ದಿನಪತ್ರಿಕೆಗೆ ಶೈಕ್ಷಣಿಕ ಕಾರ್ಯಕ್ರಮದಡಿ ಅಧ್ಯಯನ ಭೇಟಿ ನೀಡಿದ್ದರು.
ಪತ್ರಿಕೆಯ ಹಲವಾರು ವಿಭಾಗಗಳ ಕಾರ್ಯನಿರ್ವಹಣೆ ಬಗ್ಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಜನತಾವಾಣಿ ದಿನಪತ್ರಿಕೆಯ ಸಂಪಾದಕ ಎಂ.ಎಸ್. ವಿಕಾಸ್, ಪಾಲಿಟೆಕ್ನಿಕ್‌ನ ವಿಭಾಗಾಧಿಕಾರಿ ಎಸ್.ಸಿ. ಬಿಳಿಕೇರಿ, ಉಪನ್ಯಾಸಕರಾದ ಕೆ.ಬಿ. ರುದ್ರೇಶ್, ಎಸ್. ನಾಗರಾಜ್, ಬಿ. ಸಿದ್ದಮೂರ್ತಿ, ಟಿ.ಹೆಚ್.ಎಂ. ಬಸವರಾಜ್ ಉಪಸ್ಥಿತರಿದ್ದರು.
ಪತ್ರಿಕೆಯ ಸಿಬ್ಬಂದಿ ಯಶೋಧ ಅಗಡಿಮಠ, ಎಸ್.ಎ. ಶ್ರೀನಿವಾಸ್, ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, ಮಂಜುಳ ನಾಗರಾಜ್, ಶೀಲಾ ವೀರಭದ್ರಪ್ಪ, ಅಣ್ಣಪ್ಪ, ಚಂದ್ರಪ್ಪ, ಮೊಹಮ್ಮದ್ ರಫಿ ಮತ್ತಿತರರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.