ದಾವಣಗೆರೆ, ಮಾ. 6- ದಾವಣಗೆರೆ ಮಹಾನಗರ ಪಾಲಿಕೆ ಮಾಲೀಕತ್ವದಲ್ಲಿರುವ ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿದ್ದು, ಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. 1.2 ಕಿ.ಮೀ ಏರಿಯನ್ನು ಎತ್ತರಿಸಿ ಗಟ್ಟಿಗೊಳಿಸಲಾಗಿದ್ದು, ಕಲ್ಲುಗಳ ಹೊದಿಕೆಯ ಕೆಲಸವು ಪ್ರಗತಿಯಲ್ಲಿದೆ. ಉಳಿದಂತೆ 3.7 ಕಿ.ಮೀ ನಲ್ಲಿ ಮುಳ್ಳು ಗಂಟೆ ಪೊದೆ ಮತ್ತು ಹಳೆಯ ಕಲ್ಲುಗಳ ಹೊದಿಕೆಯನ್ನು ತೆರವುಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.
March 1, 2025