ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್ನಲ್ಲಿರುವ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಕ್ಲಬ್ ವತಿಯಿಂದ ನಡೆದ ಈ ಪ್ರದರ್ಶನದಲ್ಲಿ ಬೆಳಗಾವಿಯ ಈರಪ್ಪ ಜಿ.ಪರಮಶೆಟ್ಟಿ ಎನ್ನುವರು ಸಂಗ್ರಹಿಸಿದ್ದ ನೂರೈವತ್ತಕ್ಕೂ ಹೆಚ್ಚು ದೇಶಗಳ ನೋಟುಗಳನ್ನು ಹಾಗೂ ಚಂದ್ರಗುಪ್ತ ಮೌರ್ಯ, ಹೊಯ್ಸಳ, ಕದಂಬ, ಪೇಶ್ವೆಗಳ ಕಾಲದ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
January 14, 2025