ಮಲೇಬೆನ್ನೂರು, ಮಾ.5 – ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವನ್ನು ಈ ಬಾರಿ ಸರಳ ಮತ್ತು ಸಾಂಕೇತಿಕ ವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ದೇವಸ್ಥಾನದಲ್ಲಿ ಸಭೆ ನಡೆಸಿದ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು, ಸರ್ಕಾರದ ಸೂಚನೆಯಂತೆ ಜಾತ್ರೆಯನ್ನು ಆಚರಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿಗಳೂ ಆದ ಮುಜರಾಯಿ ಉಸ್ತುವಾರಿ ಅಧಿಕಾರಿ ಶ್ರೀಧರಮೂರ್ತಿ ತಿಳಿಸಿದರು. ಆದ್ದರಿಂದ ಭಕ್ತರು ಸಹಕರಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.
December 27, 2024