ಕೂಡ್ಲಿಗಿ, ಮಾ.5- ತಾಲ್ಲೂಕು ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ವಿಭಾಗವಾರು ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ಕೂರುವುದಾಗಿ ಕೂಡ್ಲಿಗಿ ತಾಲ್ಲೂಕು ಪಂಚಮಸಾಲಿ ಸಮಾಜ ವತಿಯಿಂದ ಆಗ್ರಹಿಸಿ, ತಹಶೀಲ್ದಾರ್ ಮಹಾಬಲೇಶ್ವರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಗೌರವಾಧ್ಯಕ್ಷ ಗುಳಿಗಿ ವೀರೇಂದ್ರಕುಮಾರ್, ಕಾರ್ಯದರ್ಶಿ ರಮೇಶ್, ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಗುಂಡುಮುಣಗು ತಿಪ್ಪೇಸ್ವಾಮಿ, ಕಲ್ಲೇಶಪ್ಪ, ನಂದಿ ಬಸವರಾಜ, ಟಿ.ಜಿ. ಮಲ್ಲಿಕಾರ್ಜುನಗೌಡ, ಪಿ. ರಜನೀಕಾಂತ್, ಕೆ. ಸುನೀಲ್ ಗೌಡ, ಗಿರೀಶ ಕುಮಾರ್, ಜಿ.ಆರ್. ಸಿದ್ದೇಶ್ವರ, ನಂದೀಶ, ಲಿಂಗನಗೌಡ್ರು, ಮರುಳಸಿದ್ದಪ್ಪ, ಬಣಕಾರ ವೀರಭದ್ರಪ್ಪ ಇನ್ನಿತರರಿದ್ದರು.