ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಒತ್ತು : ಶಾಸಕ ರಾಮಪ್ಪ

ಮಲೇಬೆನ್ನೂರು, ಮಾ.4- ಭಾನುವಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಸ್. ರಾಮಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಈಗಾಗಲೇ ನಿರ್ಮಿಸಿದ್ದು, ಘಟಕಗಳ ನಿರ್ವಹಣೆ ಬಹಳ ಮುಖ್ಯವಾಗಿದೆ. ರಿಪೇರಿ ಕೆಲಸ ಮಾಡಲು ಸಂಬಂಧ ಪಟ್ಟವರು ವಿಳಂಬ ಮಾಡುತ್ತಿದ್ದಾರೆಂಬ ದೂರುಗಳು ಬಂದಿದ್ದು, ಈ ಕುರಿತು ನಿಗಾವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ದೊಡ್ಡ ಊರುಗಳಿಗೆ ಕನಿಷ್ಟ 2 ರಿಂದ 3 ಘಟಕಗಳ ನಿರ್ಮಾಣಕ್ಕೆ ರಾಮಪ್ಪ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಕೊಟ್ರೇಶ್, ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಕೆ. ಕನ್ನಪ್ಪ, ತಾ.ಪಂ. ಸದಸ್ಯೆ ವಿಶಾಲಾಕ್ಷಮ್ಮ ಕೊಟ್ರೇಶಪ್ಪ, ಗ್ರಾ.ಪಂ. ಸದಸ್ಯ ಎಂ.ಜಿ. ಬಸವರಾಜ್, ಡಿ.ಜಿ. ಮಹೇಶ್ವರಪ್ಪ, ಪವಾಡಿ ಮಂಜಪ್ಪ, ಚಂದ್ರಪ್ಪ ಬಾಗಜ್ಜಿ, ಪಿಡಿಒ ನಾಗರಾಜ್ ಸಾರಥಿ ಇನ್ನಿತರರಿದ್ದರು.

error: Content is protected !!