ರಾಣೇಬೆನ್ನೂರು, ಫೆ. 28- ಓ ಟಿ ಎಸ್ ಯೋಜನೆಯಲ್ಲಿ ರೈತರ ಸಾಲದ ಹಣ ತುಂಬಿಸಿಕೊಳ್ಳುವಂತೆ ಒತ್ತಾಯಿಸಿ ಮಾಕನೂರ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಮೂಲಕ ಹಿರಿಯ ಅಧಿಕಾರಿಗಳಿಗೆ ರೈತ ಮುಖಂಡರುಗಳಾದ ರವೀಂದ್ರಗೌಡ ಪಾಟೀಲ ಹಾಗೂ ಈರಣ್ಣ ಹಲಗೇರಿ ಅವರುಗಳು ಮನವಿ ಸಲ್ಲಿಸಿದರು.
ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಲ್ಲಿ ಓ ಟಿ ಎಸ್ ಯೋಜನೆ ಅನ್ವಯ ರೈತರಿಂದ ಸಾಲದ ಹಣ ತುಂಬಿಸಿಕೊಂಡು ಅವರನ್ನು ಋಣಮುಕ್ತರನ್ನಾಗಿಸುತ್ತಿದ್ದು, ಯೂನಿಯನ್ ಬ್ಯಾಂಕ್‌ನವರು ಈ ಯೋಜನೆ ನಮ್ಮ ಬ್ಯಾಂಕ್‌ನಲ್ಲಿಲ್ಲ ಎಂದು ಹೇಳಿ ರೈತರನ್ನು ಮರಳಿ ಕಳಿಸುತ್ತಿದ್ದಾರೆ.
ನೈಸರ್ಗಿಕ ವಿಕೋಪಕ್ಕೆ ಸಿಲುಕಿ ನರುಳುತ್ತಿರುವ ರೈತರು ತಮ್ಮ ಸಂಕಷ್ಟದ ಸಮಯದಲ್ಲೂ ಸಹ ಸಾಲದಿಂದ ಋಣಮುಕ್ತರಾಗಬೇಕೆಂದು ಹಂಬಲಿಸುವ ಯೂನಿಯನ್ ಬ್ಯಾಂಕ್ ಕಟ್ ಬಾಕಿ ಸಾಲಗಾರ ರೈತರಿಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಪಂದಿಸಬೇಕು ಹಾಗೂ ಸರ್ಕಾರ ಬ್ಯಾಂಕಿಗೆ ಸೂಕ್ತ ಆದೇಶ ನೀಡಬೇಕು ಎಂದು ಒತ್ತಾಯಿಸಿದ ಮನವಿ ಪತ್ರವನ್ನು ಡೆಪ್ಯುಟಿ ಮತ್ತು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‌ಗಳಿಗೆ ಹಾಗೂ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಕಳುಹಿಸಿದರು.