ದಾವಣಗೆರೆ, ಫೆ.22- ಮಹಾನಗರ ಪಾಲಿಕೆ ವ್ಯಾಪ್ತಿಯ 7ನೇ ವಾರ್ಡ್ ದೇವರಾಜ ಅರಸು ಬಡಾವಣೆಯ ಮೈದಾನದಲ್ಲಿ 49.24 ಲಕ್ಷ ರೂ. ವೆಚ್ಚದ ಆಕ್ಯುಪಂಕ್ಚರ್ ವಾಕಿಂಗ್ ಪಾತ್ ನಿರ್ಮಾಣ ಕಾಮಗಾರಿ ಮತ್ತು ಮಹಾನಗರ ಪಾಲಿಕೆ ಕಛೇರಿಯ ಆವರಣದಲ್ಲಿ 59 ಲಕ್ಷ ರೂ. ವೆಚ್ಚದಲ್ಲಿ ಉಪಹಾರ ಮಂದಿರ ನಿರ್ಮಾಣ ಕಾಮಗಾರಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಶಂಕುಸ್ಥಾಪನೆ ನೆರವೇರಿಸಿದರು.
ಮೇಯರ್ ಬಿ.ಜಿ.ಅಜಯ್ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಬಿ.ಹೆಚ್. ವಿನಾಯಕ ಪೈಲ್ವಾನ್, ಹೆಚ್.ಸಿ.ಜಯಮ್ಮ, ಶಿವು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.