ದಾವಣಗೆರೆ, ಫೆ.20- ಡಯಟ್ ಪ್ರಾಂಶುಪಾಲ ಹೆಚ್.ಕೆ.ಲಿಂಗರಾಜು ಅವರ `ಶಿಕ್ಷಣ ಯೋಗಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರ ಮವು ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಲಿಂಗರಾಜು ಮತ್ತು ಶ್ರೀಮತಿ ಲೀಲಾವತಿ ದಂಪತಿಯನ್ನು ಸೌಹಾರ್ದ ಪ್ರಕಾಶನದ ಆಶ್ರಯದಲ್ಲಿ ಕೃತ ಜ್ಞತಾ ಕೂಟ ಕಾರ್ಯಕ್ರಮವು ಸಿದ್ಧಗಂಗಾ ಶಾಲೆಯಲ್ಲಿ ಇಂದು ನಡೆಯಿತು.
ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟೀನ್ ಡಿ.ಸೌಜ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಸೌಹಾರ್ದ ಪ್ರಕಾಶನದ ಪ್ರಕಾಶಕರಾದ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ, ಡಯಟ್ನ ಉಪನ್ಯಾಸಕ ರವಿನಾಯಕ್, ಸಾಹಿತಿ ಸಂಧ್ಯಾ ಸುರೇಶ್, ವಾಗ್ದೇವಿ, ಮಲ್ಲಮ್ಮ ನಾಗರಾಜ್, ಎಂ ಟಿ.ಶರಣಪ್ಪ, ಮಂಜುಳಾ ಹಿರೇ ಮಠ, ರತ್ನವ್ವ ಸಾಲಿಮಠ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.