ನ್ಯಾಮತಿ, ಫೆ.15- ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸೋಮವಾರ ಮಾಲಾಧಾರಿಗಳಿಂದ ಬೋಗ್ ಹೋಮ ನಡೆಸುವ ಮೂಲಕ ಸಂತ ಸೇವಾಲಾಲ್ ಜಯಂತ್ಯೋತ್ಸವ ಮುಕ್ತಾಯಗೊಂಡಿತು.
ಶಾಸಕ ರೇಣುಕಾಚಾರ್ಯರು ಬೋಗ್ನಲ್ಲಿ ಪಾಲ್ಗೊಂಡು ಮಾಲಾಧಾರಿಗಳಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕಳೆದ ಒಂದು ವಾರದಿಂದ ತಾಲ್ಲೂಕು ಹಾಗೂ ಜಿಲ್ಲೆಯ ಅಧಿಕಾರಿ ವರ್ಗದವರು, ಕಾರ್ಯಕ್ರಮದ ಆಯೋಜಕರು ಶ್ರಮವಹಿಸಿದ ಪರಿಣಾಮದಿಂ ದಾಗಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರವಾಯಿತು ಹಾಗೂ ತಾಂಡಾ ಅಭಿವೃದ್ಧಿ ನಿಗಮ, ಕ್ಷೇತ್ರ ಅಭಿವೃದ್ಧಿ ನಿರ್ವಾಣ ಪ್ರತಿಷ್ಠಾನ, ಜನ್ಮಸ್ಥಾನ ಮಹಾಮಠ ಸಮಿತಿ ಜಯಂತೋತ್ಸವ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಿವೆ ಎಂದರು.
ಶಾಸಕ ರಾಜೀವ್, ನಿಗಮದ ನಿರ್ದೇಶಕ ಮಾರುತಿನಾಯ್ಕ, ಹೊನ್ನಾಳಿ ಈಶ್ವರನಾಯ್ಕ ಸೇರಿದಂತೆ ಇತರೆ ಗಣ್ಯರು ಮಾಲಾಧಾರಿಗಳು ಬೋಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.