ಮಲೇಬೆನ್ನೂರಿನಲ್ಲಿ ಸೇವಾಲಾಲ್ ಜಯಂತಿ

ಮಲೇಬೆನ್ನೂರು, ಫೆ.15- ಇಲ್ಲಿನ ಪುರಸಭೆ ಕಚೇರಿಯಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ 282ನೇ ಜಯಂತಿಯನ್ನು ಆಚರಿಸಲಾಯಿತು. ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದ ಪ್ರಭಾರ ಮುಖ್ಯಾಧಿಕಾರಿ ಉದಯಕುಮಾರ್ ಎನ್.ತಳವಾರ ಅವರು ಸೇವಾಲಾಲ್ ಕುರಿತು ಮಾತನಾಡಿದರು.

ಪುರಸಭೆ ಅಧ್ಯಕ್ಷರಾದ ಶ್ರೀಮತಿ ನಾಹೀದ ಅಂಜುಂ, ಉಪಾಧ್ಯಕ್ಷೆ ಶ್ರೀಮತಿ ಅಂಜಿನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಸದಸ್ಯರಾದ ಎ.ಅರೀಫ್ ಅಲಿ ಯುಸೂಫ್, ಮಾಸಣಗಿ ಶೇಖರಪ್ಪ, ಭೋವಿ ಕುಮಾರ್, ಫಕೃದ್ದೀನ್, ಭೋವಿ ಶಿವು, ಕಣ್ಣಾಳ್ ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

error: Content is protected !!