ದಾವಣಗೆರೆ, ಏ.16- ನಗರದ ಗೌತಮ್ ಕೋ-ಆಪ್ ಸೊಸೈಟಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವ ಆಚರಿಸಲಾಯಿತು.
ಹೊಂಡದ ರಸ್ತೆ ಶಾಲೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಸಿ. ಮೋಹನ್ ಕುಮಾರ್ ಮಾತನಾಡಿ, ಬಾಬಾ ಸಾಹೇಬರು ಸಮ ಸಮಾಜಕ್ಕೆ ನಡೆಸಿದ ಹೋರಾಟದಲ್ಲಿ ಮೀಸಲಾತಿ ಪ್ರಮುಖ ಅಸ್ತ್ರವಾಗಿದ್ದು, ಅದು ಈ ಮಾರುಕಟ್ಟೆಯ ಸರಕಾಗಿರುವುದು ಖೇದನೀಯ ಎಂದರು.
ಸೊಸೈಟಿ ಅಧ್ಯಕ್ಷ ರಾಘವೇಂದ್ರ, ಉಪನ್ಯಾಸಕ ರಾಮಚಂದ್ರ ಅಂಬೇಡ್ಕರ್ ಅವರ ಆದರ್ಶ ಜೀವನವನ್ನು ಸ್ಮರಿಸಿದರು. ನಿವೃತ್ತ ಎಸ್.ಪಿ. ರುದ್ರಮುನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ರಮೇಶ್, ಭೀಮಣ್ಣ, ಪ್ರಸಾದ್, ಓಂಕಾರಪ್ಪ, ಎಲ್.ಟಿ. ಮಧುಸೂದನ್, ಸರೋಜ, ವಿಮಲ ಇನ್ನಿತರರು ಭಾಗವಹಿಸಿದ್ದರು.