ದಾವಣಗೆರೆ, ಫೆ.14- ಫುಲ್ವಾಮಾ ಹತ್ಯಾಕಾಂಡದ ಎರಡನೇ ವರ್ಷದ ಕರಾಳ ನೆನಪಿನಲ್ಲಿ ಮತ್ತು ಧಾರವಾಡ ಸಮೀಪದ ಇಟ್ಟಿಗಟ್ಟಿ ಬಳಿ ಈಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಡಿದ ನಗರದ ಮಾತೆಯರ ನೆನಪಿನಲ್ಲಿ ಡಿಯರ್ ಲೈಫ್ ಎಂಪವರ್ ಇಂಡಿಯಾ ಮತ್ತು ರೋಟರಿ ಕ್ಲಬ್ ದಾವಣಗೆರೆ ದಕ್ಷಿಣ ಇವರ ಜಂಟಿ ಆಶ್ರಯದಲ್ಲಿ ನಗರದ ಆರೈಕೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಆರೈಕೆ ಆಸ್ಪತ್ರೆಯ ಡಾ. ಹಾಲಸ್ವಾಮಿ ಕಂಬಾಳಿಮಠ, ಡಾ. ದೀಪಶ್ರೀ, ಡಿಯರ್ ಲೈಫ್‌ನ ವಿವೇಕ್, ಸುನೀಲ್, ರೋಟರಿ ದಾವಣಗೆರೆ ದಕ್ಷಿಣ ವಿಭಾಗದ ಅಧ್ಯಕ್ಷ ಬಸವರಾಜ್ ಹಾಗೂ ಲೈಫ್‌ಲೈನ್ ಬ್ಲಡ್ ಬ್ಯಾಂಕಿನ ಪ್ರಶಾಂತ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.