ಹರಪನಹಳ್ಳಿ, ಫೆ.14 – ಹಗರಿ ಬೊಮ್ಮನಹಳ್ಳಿ ಪಟ್ಟಣದ ಆರಾಧ್ಯ ದೇವ ಶ್ರೀ ವೆಂಕಟೇಶ್ವರ ಸ್ವಾಮಿ ರಥೋತ್ಸವದ ನಿಮಿತ್ತ ಇದೇ ದಿನಾಂಕ 17 ರಂದು ಬಯಲು ಕುಸ್ತಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ.
ಇಲ್ಲಿನ ರಾಮನಗರದ ಗಂಬಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಾಣಿಕೇರಿ ದೈವಸ್ಥರು ಕುಸ್ತಿ ಪಂದ್ಯಾಟವನ್ನು ಆಯೋಜಿಸಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಯಿಂದ ಕುಸ್ತಿಗಳು ಆರಂಭವಾಗುತ್ತವೆ ಅಖಾಡದಲ್ಲಿಯೇ ಜೊತೆ ಮಾಡಲಾಗವುದು. ಗೆದ್ದ ಪೈಲ್ವಾನರಿಗೆ ನಗದು ಬಹುಮಾನ ಕೊಟ್ಟು ಪುರಸ್ಕರಿಸಲಾಗುತ್ತದೆ. ದೊಡ್ಡ ಜೊತೆ ಪೈಕಿ ಹಾಗೂ ಪರಿಷಿ ಪೈಕಿ ಕುಸ್ತಿಗಳನ್ನು ಆಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪತ್ರಕರ್ತ ಹುಳ್ಳಿ ಪ್ರಕಾಶ್ (9448234961) ಅವರನ್ನು ಸಂಪರ್ಕಿಸಬಹುದು.