ದಾವಣಗೆರೆ, ಏ.14 – ಸಂವಿಧಾನಶಿಲ್ಪಿ ಡಾ. ಭೀಮ್ ರಾವ್ ರಾಮ್ ಜೀ ಅಂಬೇಡ್ಕರ್ ಅವರ ಜನ್ಮ ದಿನದ ಪ್ರಯುಕ್ತ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕಾನೂನು ಪ್ರಕೋಷ್ಟದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿಗಳು, ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜ್, ಸೊಕ್ಕೆ ನಾಗರಾಜ್, ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ, ಸಹ ಸಂಚಾಲಕ ಧನಂಜಯ ಬಸವನಗೌಡ ಹಾಜರಿದ್ದರು. ಜಿಲ್ಲಾ ಸಂಚಾಲಕ ಹೆಚ್.ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಸಹ ಸಂಚಾಲಕ ಧನಂಜಯ ನಿರೂಪಿಸಿದರು, ಎ.ಎಸ್.ಮಂಜುನಾಥ್ ವಂದಿಸಿದರು.
December 27, 2024