ದಾವಣಗೆರೆ, ಏ. 14- ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಪ್ಲವ ನಾಮ ಸಂವತ್ಸರದ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ಶ್ರೀ ಮಣ್ಣೂರು ಗೋಪಾಲಾಚಾರ್ಯರು ನೆರವೇರಿಸಿಕೊಟ್ಟರು. ಈ ಸಂವತ್ಸರದ ಬಗ್ಗೆ ವಿವರಗಳನ್ನು ತಿಳಿಸುತ್ತಾ ವಿಶೇಷವಾಗಿ ಈ ಸಂವತ್ಸರದಲ್ಲಿ ಗ್ರಹಣವಿದ್ದರೂ ಭಾರತದಲ್ಲಿ ಮಾತ್ರ ಯಾವುದೇ ಗ್ರಹಣ ಗೋಚರಿಸುವುದಿಲ್ಲ ಎಂದು ತಿಳಿಸಿದರು. ಇಂದಿನಿಂದ 7 ದಿವಸಗಳ ಕಾಲ ದಿನಾಂಕ 21ರ ರಾಮನವಮಿಯ ವರೆಗೆ ರಾಮಾಯಣ ಪಾರಾಯಣ ಇರುತ್ತದೆ ಎಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ
ಆರ್.ಎಲ್. ಪ್ರಭಾಕರ್ ತಿಳಿಸಿದ್ದಾರೆ.
December 28, 2024