ಭರಮಸಾಗರ ಏತ ನೀರಾವರಿ ಯೋಜನೆ
ದಾವಣಗೆರೆ, ಫೆ.10- ಭರಮಸಾಗರದ ಏತ ನೀರಾವರಿ ಯೋಜನೆ ಕಾಮಗಾರಿಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರೈಸಿಂಗ್ ಮೇನ್ ಪೈಪ್‍ಲೈನ್ ಅಳವಡಿಸುವ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹದಡಿ ರಸ್ತೆಯ ಲೋಕಿಕೆರೆ ಬ್ರಿಡ್ಜ್ ಬಳಿ ಬುಧವಾರ ಸ್ಥಳ ವೀಕ್ಷಣೆ ಮಾಡಿದರು. ಈ ವೇಳೆ ಎಇಇ, ಎನ್‍ಹೆಚ್‍ಎಐ ಅಧಿಕಾರಿಗಳು, ಶಿರಮಗೊಂಡನಹಳ್ಳಿ ಗ್ರಾಮಸ್ಥರು, ರವೀಂದ್ರನಾಥ್ ಬಡಾವಣೆ ನಿವಾಸಿಗಳು ಇದ್ದರು.