ಮಲೇಬೆನ್ನೂರು, ಏ.12- ಯಲವಟ್ಟಿ ಗ್ರಾಮ ದಲ್ಲಿ ಇದೇ ಏ.17ರ ಶನಿವಾರ ತಹಶೀಲ್ದಾರ್ ಕೆ.ಬಿ. ರಾಮ ಚಂದ್ರಪ್ಪ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೂರ್ವ ಭಾವಿಯಾಗಿ ಉಪತಹಶೀ ಲ್ದಾರ್ ಆರ್. ರವಿ ಅವರು ಇಂದು ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ರವಿ ಅವರು, ಗ್ರಾಮ ವಾಸ್ತವ್ಯ ಯಶಸ್ವಿ ಯಾಗಲು ಗ್ರಾಮಸ್ಥರು ಸಹಕಾರ ನೀಡಬೇಕು. ಜನರ ಹಾಗೂ ಗ್ರಾಮದ ಸಮಸ್ಯೆಗಳು ಏನೇ ಇದ್ದರೂ ಅರ್ಜಿ ಮೂಲಕ ಅಥವಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಬಹುದೆಂದರು.
ಗ್ರಾ.ಪಂ. ಸದಸ್ಯರಾದ ಸಿದ್ದೇಶ್, ಮಂಜುಳಾ, ಶಶಿಕಲಾ, ರಜಿಯಾ ಬೇಗಂ, ಗ್ರಾಮದ ಡಿ.ಹೆಚ್. ಚನ್ನಬಸಪ್ಪ, ಮಹೇಂದ್ರಪ್ಪ, ನರಸಪ್ಪ, ರಾಮಚಂದ್ರಪ್ಪ, ಹೊರಟ್ಟಿ ರಾಜು, ರಾಜಸ್ವ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಸುಭಾನಿ, ಪಿಡಿಒ ರಾಮನಗೌಡ, ಕಾರ್ಯದರ್ಶಿ ದೀಪಾ, ಗ್ರಾಮ ಸಹಾಯಕ ರಂಗನಾಥ್ ಇನ್ನಿತರರು ಸಭೆಯಲ್ಲಿದ್ದರು.