ಜಗಳೂರು, ಏ.9-ದೇಶದ ಗಡಿ ಕಾಯುವ ಯೋಧರ ರಕ್ಷಣೆಗೆ ಕೇಂದ್ರ ಸರ್ಕಾರ ಹಾಗು ರಕ್ಷಣಾ ಇಲಾಖೆ ಅತ್ಯುನ್ನತ ಭದ್ರತಾ ಸಲಕರಣೆಗಳನ್ನು ನೀಡುವ ಮೂಲಕ ಪ್ರಾಣಗಳನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ತಿಳಿಸಿದರು.
ಸಂಜೆ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಯುವ ಕಾಂಗ್ರೆಸ್ ವತಿಯಿಂದ, ಛತ್ತೀಸ್ಗಡದಲ್ಲಿ ನಡೆದ ಅರೆಸೇನಾ ಪಡೆಯ ಸೈನಿಕರ ಹತ್ಯೆ ಖಂಡಿಸಿ, ಯುವ ಕಾಂಗ್ರೆಸ್ ವತಿಯಿಂದ ಮೌನಾಚರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಆಂತರಿಕ ರಕ್ಷಣಾ ವೈಫಲ್ಯದಿಂದಾಗಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಮೃತ ಪಟ್ಟ ಯೋಧರಿಗೆ ನಾವೆಲ್ಲರು ಗೌರವ ಸೂಚಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಕಾಯುವ ಸೈನಿಕರಿಗೆ ಭದ್ರತೆ ಇಲ್ಲದಂತಾಗಿದೆ. ಪುಲ್ವಾಮ ದಾಳಿ ಮಾಸುವ ಮುನ್ನವೇ ಇಂತಹ ಘಟನೆ ನಡೆದಿರುವುದು ದುರಂತದ ಸಂಗತಿ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಮುಖಂಡರಾದ ಬಿ. ಲೋಕೇಶ್, ರೇವಣ್ಣ , ವಿಜಯ್ ಕೆಂಚೋಳ್, ಎನ್.ಟಿ. ತಿಪ್ಪೇಸ್ವಾಮಿ , ಜಮೀಲ್, ಶಿವಣ್ಣ, ಕಾಟಪ್ಪ, ನಾಗಣ್ಣ, ಹರೀಶ್ ರೆಡ್ಡಿ, ಅನಿಲ್ ಇನ್ನಿತರರಿದ್ದರು.