ಹೂವಿನ ಹಡಗಲಿ, ಫೆ.7- ತಾಲ್ಲೂಕು ರೆಡ್ಡಿ ಸಮಾಜದಿಂದ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರಾಗಿರುವ ನಾಗರಾಜ ತಿಗರಿ, ಪ್ರಭಾಕರ ಗುತ್ತಲ, ಶ್ರೀನಿವಾಸರೆಡ್ಡಿ, ಗಿರಿರಾಜರೆಡ್ಡಿ, ಹೆಚ್. ಬಸವರಾಜ, ಗೌರಮ್ಮ, ಜಿ. ರೂಪಾ, ಶ್ರೀಕಾಂತ ರೆಡ್ಡಿ ಹಾಗೂ ನಾಗರಾಜರೆಡ್ಡಿ ಡಂಬಳ ಇವರಲ್ಲದೇ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ ಚುನಾಯಿತರಾಗಿರುವ ಎನ್.ಡಿ. ರೇಖಾರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಸಿ. ಮೋಹನರೆಡ್ಡಿ, ಕನ್ನಿಹಳ್ಳಿ ನಾಗರಾಜ, ಎಸ್. ದ್ವಾರಕೀಶ್ರೆಡ್ಡಿ ಪಾಲ್ಗೊಂಡಿದ್ದರು. ಪಟ್ಟಣದ ಮಲ್ಲನಕೇರಿ ಮಠದಲ್ಲಿ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ.