ಹರಪನಹಳ್ಳಿ, ಫೆ.5- ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕೆಪಿಎಂಇಎ, ಐಎಂಎ, ಐಡಿಎ, ಆಯುಷ್ ಮತ್ತು ಸರ್ಕಾರಿ ವೈದ್ಯರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಲ್ಲಾ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಬೈಕ್ ರಾಲಿ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.
ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನ ಕುಮಾರ್
ರಾಲಿಗೆ ಚಾಲನೆ ನೀಡಿ ಮಾತನಾಡಿ, ದುಶ್ಚಟಗಳಿಗೆ ದಾಸರಾಗದಿದ್ದರೆ ಕ್ಯಾನ್ಸರ್ ರೋಗ ತಡೆಗಟ್ಟಲು ಸಾಧ್ಯ. ರೋಗ ಲಕ್ಷಣಗಳು ಗೋಚರಿಸಿದ ಕೂಡಲೇ ಚಿಕಿತ್ಸೆ ಪಡೆದರೆ ಗುಣಮುಖರಾಗಲು ಹೆಚ್ಚು ಅವಕಾಶಗಳಿರುತ್ತವೆ. ಆದಷ್ಟು ತಂಬಾಕು ರಹಿತ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ಐಎಂಎ ಅಧ್ಯಕ್ಷ ಡಾ. ಮಹೇಶ್ ಮಾತನಾಡಿ, ಖಾಸಗಿ ಹಾಗೂ ಸರ್ಕಾರಿ ವೈದ್ಯರ ಸಮೂಹ ಒಟ್ಟಾಗಿ ಕ್ಯಾನ್ಸರ್ ರೋಗದ ವಿರುದ್ಧ ತಾಲ್ಲೂಕಿನಲ್ಲಿ ಸಮರ ಸಾರಿರುವುದು ಸ್ವಾಗತಾರ್ಹ ಎಂದರು. ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಶಿವಕುಮಾರ್, ಶಿವಕೃಪ ಆಸ್ಪತ್ರೆಯ ಡಾ. ಹರ್ಷ ಮಾತನಾಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್, ಡಾ. ಪಿ. ಅನಂತಶೆಟ್ಟಿ, ಡಾ. ಎಸ್.ಎಂ. ಖಾನ್, ಡಾ. ಮಂಜುನಾಥ್, ಡಾ. ತಿಪ್ಪೇಸ್ವಾಮಿ, ಡಾ. ಶೇಖ್‌ನಫ್ತಿಯಾರ್, ಡಾ. ಕೊಟ್ರೇಶ್, ಡಾ. ಕಿಶನ್ ಭಾಗವತ್, ಡಾ. ಸಂಗೀತಾ, ಡಾ. ತ್ರಿವೇಣಿ, ಡಾ. ಜಯಶ್ರೀ, ಡಾ. ಅಂಬಿಕಾ, ಡಾ. ಸೀಮಾ ಅಧಿಕಾರ, ಡಾ. ಪ್ರಿಯಾಂಕಾ ಅಧಿಕಾರ, ಡಾ. ವಿಶ್ವರಾಧ್ಯ, ಡಾ. ಪ್ರಶಾಂತ ಬಡ್ಡನವರ್ ಹಾಗೂ ಇತರರು ಭಾಗವಹಿಸಿದ್ದರು.