ದಾವಣಗೆರೆ, ಫೆ.3- ನಗರದ ಪುಟ್ಟರಾಜ ಗಾನ ಗುರುಕುಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಸುಗಮ ಸಂಗೀತ, ರಂಗಗೀತೆಗಳ ಸಂಗೀತ ಸಂಭ್ರಮ ಸಮಾರಂಭವು ನಗರದ ರೋಟರಿ ಬಾಲಭವನದಲ್ಲಿ ಕಳೆದ ವಾರ ನಡೆಯಿತು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಖಿನ್ನತೆಯ ಕಲುಷಿತ ಮನಸ್ಸುಗಳನ್ನು ಪುಳಕಿತಗೊಳಿಸುವ ಶಕ್ತಿ ಸಂಗೀತಕ್ಕೆ ಇದೆ ಎಂದು ಹೇಳಿದರು. ಪುಟ್ಟರಾಜ ಗಾನ ಗುರುಕುಲದ ಅಧ್ಯಕ್ಷ ಬಸವಲಿಂಗಯ್ಯ ವಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಗೀತ ಗುರುಗಳಾದ ರೇವಣಸಿದ್ದಪ್ಪ ಉಪಸ್ಥಿತರಿದ್ದರು.
ಸಂಗೀತಾ ಬಿ. ಹಿರೇಮಠ ಪ್ರಾರ್ಥಿಸಿದರು. ಗುರುಕುಲದ ಕಾರ್ಯದರ್ಶಿ ಲತಾ ವಿ. ಹಿರೇಮಠ ಸ್ವಾಗತಿಸಿ, ವಂದಿಸಿದರು. ಸುಗಮ ಸಂಗೀತ ಕಲಾವಿದರಾದ ಶ್ರೀಮತಿ ರೇಖಾ ಓಂಕಾರಪ್ಪ ಮತ್ತು ವೃತ್ತಿ ರಂಗಭೂಮಿ ಕಲಾವಿದೆ ಶ್ರೀಮತಿ ರೇಣುಕಾ ಮತ್ತು ತಂಡದವರಿಂದ ರಂಗಗೀತೆ, ಸಂಗೀತ ಕಾರ್ಯಕ್ರಮ ನಡೆಯಿತು. ಎಸ್. ಶಿವಕುಮಾರ್ ನಿರೂಪಿಸಿದರು.