ತ್ಯಾಜ್ಯ ಭರಿತ ಖಾಲಿ ನಿವೇಶನಗಳ ಸ್ವಚ್ಚತೆ ಆರಂಭ

ಮಾಲೀಕರಿಗೆ ದಂಡದ ರೂಪದಲ್ಲಿ ಶುಲ್ಕ ವಸೂಲಿ

ದಾವಣಗೆರೆ, ಫೆ.1- ನಗರ ಪಾಲಿಕೆ ವತಿಯಿಂದ ಆಯುಕ್ತ ವಿಶ್ವನಾಥ ಮುದಜ್ಜಿ ಮಾರ್ಗದ ರ್ಶನದಲ್ಲಿ ನಗರದ ಪ್ರಮುಖ ಸಾರ್ವಜನಿಕ ಪ್ರದೇಶಗಳು ಮತ್ತು ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿರುವ ತ್ಯಾಜ್ಯ ಭರಿತ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಇಂದಿನಿಂದ ಆರಂಭಿಸಲಾಗಿದೆ.

ನಗರದ ಸ್ವಾಸ್ಥ್ಯ, ಸಾರ್ವಜನಿಕ ಸುರಕ್ಷತೆ ಮತ್ತು ಸೌಂದರ್ಯದ ಹಿತದೃಷ್ಟಿಯಿಂದ ಆರಂಭಿಸಲಾಗಿರುವ ಈ ಕಾರ್ಯಕ್ಕೆ ತಗುಲುವ ವೆಚ್ಚವನ್ನು ನಿವೇಶನದ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ದಂಡದ ರೂಪದಲ್ಲಿ ಶುಲ್ಕ ವಿಧಿಸಿ ವಸೂಲಿ ಮಾಡಲಾಗುತ್ತಿದೆ. 

ಪಾಲಿಕೆಯ ಆರೋಗ್ಯ ಮತ್ತು ಕಂದಾಯ ಶಾಖೆಯ ಅಧಿಕಾರಿಗಳು ಜಂಟಿಯಾಗಿ ಈ ದಿನ ಶಾಮನೂರು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದರು.

 

error: Content is protected !!