ದಾವಣಗೆರೆ, ಜ.26- ನಗರದ ಶ್ರೀ ಗುರು ವಾದ್ಯವೃಂದದಿಂದ ಶ್ರೀಮತಿ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಏರ್ಪಾಡಾಗಿದ್ದ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ತಹಶೀಲ್ದಾರ್ ಗಿರೀಶ್ ಅವರು ತಬಲ ಬಾರಿಸುವ ಮೂಲಕ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿ ಕಾರಿ ಕೊಟ್ರೇಶ್, ನಿರಂಜನಮೂರ್ತಿ, ಕಲಾವಿದರ ಸಂಘದ ಅಧ್ಯಕ್ಷ ಬಿ.ಕೆ. ಗಣೇಶ್, ಚಿಂದೋಡಿ ಶಂಭುಲಿಂಗಪ್ಪ, ಬಿ. ಶಿವಕುಮಾರ್ ಮತ್ತಿತರರಿದ್ದರು.
December 26, 2024