ಕೊಟ್ಟೂರು, ಜ.21 – ತಾಲ್ಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ಕುಮಾರ್ ಜಿ. ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ ಬಿ. ಗೋಣಿ ಬಸವರಾಜ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಜಿ. ಹಾಲೇಶಪ್ಪ, ನಾಗಲಿಂಗಪ್ಪ, ಕೊಟ್ರೇಶ್, ಬಸವರಾಜ್, ನಾಗರಾಜ, ರಮೇಶ್, ಪರಮೇಶ್, ಡಿ.ಟಿ. ಅನ್ನದಾನೇಶ್, ಬಿ. ಪತ್ತಾರ್, ಲೀಲಾ, ಗುರುಬಸವರಾಜ್, ಗೌರಮ್ಮ, ಮಂಜಮ್ಮ, ಯು.ಎಂ. ಸುನೀತಾ ಮತ್ತಿತರರು ಭಾಗವಹಿಸಿದ್ದರು.
January 20, 2025