ದಾವಣಗೆರೆ, ಜ. 26- ದಾವಣಗೆರೆ ಕ್ಲಬ್ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಮತ್ತಿಹಳ್ಳಿ ವೀರಣ್ಣ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಎ.ಬಿ. ಚಂದ್ರಶೇಖರ್, ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟಿ, ಸಹ ಕಾರ್ಯದರ್ಶಿ ಎಸ್.ಜಿ. ಉಳುವಯ್ಯ, ಕೋಶಾಧ್ಯಕ್ಷ ಹೆಚ್.ಸಿ. ಲಿಂಗರಾಜ್ ವಾಲಿ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಬೆಳ್ಳೂಡಿ ಸದಾನಂದ, ಹೆಚ್.ವಿ. ರುದ್ರೇಶ್, ಅಭಿಷೇಕ್ ಬೇತೂರು, ಮಲ್ಲಿಕಾರ್ಜುನ ಬಾದಾಮಿ, ಎಸ್.ಕೆ. ತಿಮ್ಮರಾಜ ಗುಪ್ತ, ಎಸ್.ಕೆ. ಪ್ರಶಾಂತ್ ಗುಪ್ತ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
February 25, 2025