ಹರಪನಹಳ್ಳಿ, ಜ.5- ಪಟ್ಟಣದ ತೋಟಗಾರಿಕೆ ಇಲಾ ಖೆಯ ಹತ್ತಿರ ಇರುವ ಅರಸಿಕೇರಿ – ಕೊಟ್ಟೂರು ಬೈಪಾಸ್ ರಸ್ತೆ ಬಳಿ ಇರುವ ಒಳಚರಂಡಿ ಯನ್ನು ರಸ್ತೆ ಪಕ್ಕದಲ್ಲಿ ಈ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ, ಕಳೆದ 15 ದಿನಗಳ ಹಿಂದೆ ಸಿ.ಸಿ.ರಸ್ತೆ ನಿರ್ಮಾಣ ಮಾಡುವಾಗ ಒಳ ಚರಂಡಿ ಹಾಳಾಗಿದೆ. ತೆರೆದ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಗುಂಡಿ ತೆರೆದಿರುವುದಕ್ಕೆ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕು ತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ತೆರೆದಿರುವ ಒಳಚರಂಡಿ ಬಾಯಿಯನ್ನು ಮುಚ್ಚಿ, ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
December 28, 2024