ಹರಿಹರ, ಡಿ. 27 – ನಗರದ ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ರೂಪಾ ಎಚ್. ಹಿರೇಬಿದರಿ 110 ಮೀಟರ್ ಅಡೆ ತಡೆ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯದ 13ನೇ ಅಥ್ಲೆಟಿಕ್ಸ್ ಕೂಟದ 110 ಮೀಟರ್ ಅಡೆ ತಡೆಯ ಓಟದಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಗೌರವಿಸಿ, ಸನ್ಮಾನಿಸಿ, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಆರ್.ವಿ. ಬಲರಾಮಶ್ರೇಷ್ಠಿ, ಕೆ.ಎಂ. ರವಿಕುಮಾರ್, ಸತ್ಯನಾರಾಯಣ, ಪ್ರಸನ್ನಕುಮಾರ್, ಪ್ರಾಚಾರ್ಯ ಟಿ.ಡಿ. ಸುಜಾತ, ಉಪನ್ಯಾಸಕ ಗುರುಬಸವರಾಜ್ ಮತ್ತು ಇತರರು ಉಪಸ್ಥಿತರಿದ್ದರು.