ಮಲೇಬೆನ್ನೂರು, ಡಿ. 27- ಹರಿಹರ ತಾ. ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಹನಗವಾಡಿಯ ಸಾರಥಿ ಮಂಜುನಾಥ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಲ್ಲನಾಯ್ಕನಹಳ್ಳಿಯ ಎಸ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕುಂಬಳೂರಿನ ಎಸ್.ಜಿ. ನಾಗರಾಜಪ್ಪ, ಖಜಾಂಚಿಯಾಗಿ ನಿಟ್ಟೂರಿನ ಶ್ರೀಮತಿ ಉಷಾ ಎನ್.ಜಿ. ಶಿವಾಜಿ ಪಾಟೀಲ್ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ಬೆಳ್ಳೂಡಿಯ ಕೆ.ವಿ. ರುದ್ರೇಶ್ ಅವಿರೋಧವಾಗಿ ಆಯ್ಕೆಯಾ ಗಿ ದ್ದಾರೆಂದು ಚುನಾವಣಾಧಿಕಾರಿಗಳಾದ ಸಹಾಯಕ ಕೃಷಿ ನಿರ್ದೇಶಕ ಎ. ನಾರನಗೌಡ ಪ್ರಕಟಿಸಿದ್ದಾರೆ.
ನೂತನ ಸದಸ್ಯರಾದ ಬೆಳ್ಳೂಡಿಯ ಮಾಗನೂರು ಹನುಮಂತಪ್ಪ, ಹನಗವಾಡಿಯ ಸಿ. ತಿಪ್ಪಣ್ಣ, ಕೆ. ರೇವಣಸಿದ್ದಪ್ಪ, ಬಣಕಾರ ಪ್ರಸನ್ನ, ಕೆಂಚನಹಳ್ಳಿಯ ಕೆ.ಜಿ. ನಾರಪ್ಪ, ಕುಂಬಳೂರಿನ ಹಳೆಮನೆ ಶಂಭುಲಿಂಗಪ್ಪ, ಎಸ್.ಜಿ. ನಿಂಗರಾಜ್, ಕೊಂಡಜ್ಜಿಯ ವೀರಭದ್ರಪ್ಪ, ಹೊಳೆಸಿರಿಗೆರೆಯ ಎಸ್. ಅಂಜನ್‌ಕುಮಾರ್ ಕೂಡ ಈ ಹಿಂದೆಯೇ ಅವಿರೋಧವಾಗಿ ಆಯ್ಕೆಯಾಗಿದ್ದರು.