ದಾವಣಗೆರೆ, ಡಿ. 27 – ಶ್ರೀ ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಹಾಗೂ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾ ಟಕ 2024ರ ವಿವಿಧ ಸ್ಪರ್ಧೆಗಳಲ್ಲಿ ನಗರದ ಶ್ರೀ ಸೋಮೇಶ್ವರ ವಿದ್ಯಾಲ ಯದ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಕೌಸ್ತುಬ್ ಪ್ರಥಮ ಸ್ಥಾನ ಶ್ರೇಯಸ್ ದ್ವಿತೀಯ ಹಾಗೂ ಸುಧನ್ವ ಶರ್ಮ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೌಸ್ತುಬ್ ಹಾಗೂ ಶ್ರೇಯಸ್ ರಾಜ್ಯ ಮಟ್ಟದ ಭಗವದ್ಗೀತಾ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ದೀಪ ತೃತೀಯ ಸ್ಥಾನವನ್ನ ಪಡೆದುಕೊಂಡಿದ್ದಾರೆ.
ಕಿರಿಯರ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಕೆ. ಪೂರ್ವಿತಾ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ಗೌತಮಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ನಗದು ಬಹುಮಾನವನ್ನು ನೀಡಿ ಸನ್ಮಾಸಲಾಯಿತು.