ದಾವಣಗೆರೆ, ಡಿ.27 – ಕೈಗಾರಿಕಾ ತರಬೇತಿಗಳು ಮತ್ತು ಸೃಜನಶೀಲ ಮನೋಭಾವವು ವೃತ್ತಿ ಜೀವನವನ್ನು ಬಲಪಡಿಸಲಿವೆ ಎಂದು ದಾವಣಗೆರೆ ವಿವಿಯ ನಿರ್ವಹಣಾ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಆರ್. ಸುನೀತ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಬಿಎ ಪದವಿಯ ಮೂಲಕ ನಿರ್ವಹಣಾ ಕ್ಷೇತ್ರದಲ್ಲಿ ಉತ್ತಮ ಮಾರ್ಗವನ್ನು ಕಂಡುಕೊಳ್ಳಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ನಿರ್ವಹಣಾ ತಜ್ಞರಿಗೆ ಉದ್ಯೋಗದಲ್ಲಿ ಬಹುಮುಖ್ಯ ಸ್ಥಾನವಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್ ವೆಂಕಟೇಶ್ ಬಾಬು ಮಾತನಾಡಿ, ವಿದ್ಯಾರ್ಥಿಗಳು ಪದವಿ ಹಂತದಲ್ಲೇ ಎಲ್ಲಾ ರೀತಿಯ ಕೌಶಲಗಳನ್ನು ಕಲಿಯಲು ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಬಿ.ಸಿ. ತಹಶೀಲ್ದಾರ್, ಸಹ ಪ್ರಾಧ್ಯಾಪಕಿ ಆರ್. ಯಶೋಧ, ಹಿರಿಯ ಉಪನ್ಯಾಸಕರಾದ ಶಂಕ್ರಯ್ಯ, ರಾಧ, ವೀರೇಶ್, ಡಾ.ಎನ್. ಸೌಜನ್ಯ ಮತ್ತು ಡಾ. ಪ್ರಭಾಕರ್ ಇತರರು ಇದ್ದರು. ವಿದ್ಯಾರ್ಥಿಗಳಾದ ಕೆ.ಎಸ್ ಅಶ್ವಿನಿ ಮತ್ತು ಇ. ಆಕಾಶ್ ನಿರೂಪಿಸಿದರು. ಶಕಿಬ್ ರೆಹಮಾನ್ ವಂದಿಸಿದರು.