ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ದಾವಿವಿ ವಿದ್ಯಾರ್ಥಿಗಳು ಆಯ್ಕೆ

ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ದಾವಿವಿ ವಿದ್ಯಾರ್ಥಿಗಳು  ಆಯ್ಕೆ

ದಾವಣಗೆರೆ, ಡಿ. 27 – ದಾವಣಗೆರೆ ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳು ಮುಂಬರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕೂಟದ ಅಧ್ಯಕ್ಷ ಪ್ರೊ. ಎಸ್. ಶಿಶುಪಾಲ ತಿಳಿಸಿದ್ದಾರೆ.

ಈಚೆಗೆ ಬೆಂಗಳೂರಿನ ಕ್ರೈಸ್ಟ್  ವಿಶ್ವವಿದ್ಯಾನಿಲಯದಲ್ಲಿ ಜರುಗಿದ ಆಗ್ನೇಯ ವಲಯದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಪೋಸ್ಟರ್ ಮೇಕಿಂಗ್  ವಿಭಾಗದಲ್ಲಿ  ಫೈನ್ ಆರ್ಟ್ಸ್ ಕಾಲೇಜಿನ  ಸಿದ್ಧಪ್ಪ ಕರಡಗಿ  ಪ್ರಥಮ  ಸ್ಥಾನ ಪಡೆದಿದ್ದಾರೆ. ಹಾಗೆಯೇ ಕ್ಲೇ ಮಾಡಲಿಂಗ್ ವಿಭಾಗದಲ್ಲಿ     ಫೈನ್ ಆರ್ಟ್ಸ್ ಕಾಲೇಜಿನ ವಿನೋದ್ ಆರ್  ಅವರು ತೃತೀಯ ಸ್ಥಾನ ಪಡೆದು ಇಬ್ಬರೂ ವಿದ್ಯಾರ್ಥಿಗಳು 2025 ರಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

ಇನ್‌ಸ್ಟಾಲೇಷನ್ ವಿಭಾಗದಲ್ಲಿ ವಿನೋದ್, ಅಕ್ಷತಾ ವೆಂಕಟೇಶ್,  ವಿನೋದ್ ಆರ್, ಸಂದೀಪ್ ಎಂ ಪಾಟೀಲ್, ಆನ್ ದಿ ಸ್ಪಾಟ್ ಪೇಂಟಿಂಗ್ ವಿಭಾಗದಲ್ಲಿ    ಫೈನ್ ಆರ್ಟ್ಸ್ ಕಾಲೇಜಿನ  ಐಶ್ವರ್ಯ ಎಸ್. ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಮೈಮ್  ಸ್ಪರ್ಧೆಯಲ್ಲಿ ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಯು.ಕೆ.
ಐಶ್ವರ್ಯ, ಎಂ.ಆರ್. ದೀಪಾ, ನಿವೇದಿತಾ, ಜಯದೇವ ಮತ್ತು ಚೇತನ್ 4ನೇ ಸ್ಥಾನ ಪಡೆದಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯ್ಕೆಯಾದ 46 ವಿದ್ಯಾರ್ಥಿಗಳ ತಂಡವನ್ನು ಡಾ. ನಾಗಭೂಷಣ್ ಗೌಡ ಮತ್ತು ಡಾ. ಜ್ಯೋತಿ ಅವರ ನೇತೃತ್ವದಲ್ಲಿ ಯುವಜನೋತ್ಸವಕ್ಕೆ  ಕಳುಹಿಸಲಾಗಿತ್ತು.

error: Content is protected !!