ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯ : ಪಿಎಸ್‌ಐ ಗೀತಾಂಜಲಿ ಶಿಂಧೆ

ಜೀವ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯ : ಪಿಎಸ್‌ಐ ಗೀತಾಂಜಲಿ ಶಿಂಧೆ

ಕೊಟ್ಟೂರು, ಡಿ. 23- 18 ವರ್ಷದೊಳಗಿನ ಮಕ್ಕಳ ಕೈಗೆ ಬೈಕ್ ಕೊಟ್ಟರೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ಖಚಿತ ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ಪೋಷಕರಿಗೆ ಎಚ್ಚರಿಸಿದರು. 

ಅಪರಾಧ ತಡೆ ಮಾಸಾಚರಣೆ ನಿಮಿತ್ತ ಶುಕ್ರವಾರ ಸಿಬ್ಬಂದಿಯೊಂದಿಗೆ ಪಟ್ಟಣದಲ್ಲಿ ಬೈಕ್ ರಾಲಿ ನಡೆಸಿ ಜಾಗೃತಿ ಮೂಡಿಸಿ ಮಾತನಾಡಿದರು.

ಹೆಲ್ಮೆಟ್ ಇಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ತಡೆದು ತಮ್ಮನ್ನು ಆಶ್ರಯಿಸಿ ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯ ಕುಟುಂಬ ಇದೆ, ಹೆಲೈಟ್ ಇಲ್ಲದೆ ಸಂಚರಿಸಿ ಅಪಘಾತದಿಂದ ಅವರನ್ನು ಸಂಕಷ್ಟಕ್ಕೀಡು ಮಾಡಬೇಡಿ ಎಂದು ಹೇಳಿ ಹೆಲ್ಮೆಟ್ ಕೊಟ್ಟು, ನಿತ್ಯ ಸವಾರಿ  ಧರಿಸುವಂತೆ ಹೇಳಿದರು.

ಬೈಕ್ ಸವಾರರು ತಮ್ಮ ಪ್ರಾಣದ ಸುರಕ್ಷತೆ ಹಾಗೂ ಕುಟುಂಬಸ್ಥರ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಎಂದು ಪಿಎಸ್‌ಐ ಗೀತಾಂಜಲಿ ಶಿಂಧೆ ಹೇಳಿದರು. ಬೈಕ್ ರಾಲಿ ಹರಪನಹಳ್ಳಿ ರಸ್ತೆ ಪೋಲೀಸ್ ಠಾಣೆಯಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ, ಗಾಂಧಿ ಸರ್ಕಲ್‌ಗೆ ಸಾಗಿ ದೇವಸ್ಥಾನ ಮುಂಭಾಗದಿಂದ,  ಉಜ್ಜಿನಿ ಸರ್ಕಲ್ ಮೂಲಕ ಮರಳಿ ಪೋಲೀಸ್ ಠಾಣೆಗೆ ಜಾಗೃತಿ ಜಾಥಾ ನಡೆಯಿತು.

error: Content is protected !!