ಜಯತು ಜಯತು ಭಾರತಿ

ಭವ್ಯವಾಗಿ ಮೆರೆಯಲಿ
ಭಾರತ, ಭಾರತಾಂಬೆಗೆ ಜಯವೆನುವೆ ಸತತ.
ಭಾರತೀಯರೆಲ್ಲಾ ನಾಡಿಗಾಗಿ
ಶ್ರಮಿಸಬೇಕು ಅವಿರತ.

ಭರತ ಖಂಡದಲಿ ಜನಿಸಿದವ ಪುನೀತ
ಈ ಪುಣ್ಯ ಭೂಮಿಯಲೇ ಬೆಳಗಿದವು
ಭಾಗವತ, ಮಹಾಭಾರತ ರಾಮಾಯಣ ಕಥಾ.

ಭೂರಮಣಿಗೆ ಮುಕುಟವಹುದು ನಮ್ಮ ಭಾರತ
ಭಗವತಿ, ತಾಯಿ ಭಾರತಿ ಹರಸಿಹಳು ಜ್ಞಾನ ನೀಡುತ
ಭಾಗ್ಯವ ಕರುಣಿಸಿಹಳು ಲಕುಮಿ ತಾ ನಲಿಯುತ,
ಭಕುತರ ಸಲಹುವಳು ಪಾರ್ವತಿ ಶಕ್ತಿಯ ದಯಪಾಲಿಸುತ,
ಭಯ ಭೀತಿಯ ನಿವಾರಿಸುತ.

ಭಗವಂತ ಶ್ರೀಕೃಷ್ಣ ಅರುಹಿದ ಭಗವದ್ಗೀತಾ,
ಭರತ ಭೂಮಿಗೆ ನಮಿಸಿ ಹೇಳುವೆ ತಾಯಿ ಭಾರತಿ
ನಿನಗೆ ಜಯ ಜಯವೆನುತ.


ಅಪರ್ಣಾದೇವಿ, ದಾವಣಗೆರೆ.

error: Content is protected !!