ಬಾಳುತಿರು…

ನ ಶ್ವರದ ಜೀವನದಲಿ ನನ್ನದು ನನ್ನದೆಂದು
ನಾ ಚಿಕೆ ಮಾನ ಮರ್ಯಾದೆ ಬಿಟ್ಟು ಬಾಳದಿರು
ನಿ ನ್ನದೆಂಬುದಿಲ್ಲಿ ನಿನ್ನದಲ್ಲೆಂಬುದ ತಿಳಿಯದೆ
ನೀ ನು ನೀರ ಮೇಲಣ ಗುಳ್ಳೆಯಂತಾಗದಿರು.

ನು ಡಿದಂತೆ ನಡೆಯದೆ, ನಡೆದಂತೆ ನುಡಿಯದೆ
ನೂ ರೆಂಟು ಸಮಸ್ಯೆಗಳ ಸುಳಿಗೆ ಸಿಲುಕದಿರು
ನೃ ಪನಾಗುವ ತಿರುಕನ ಕನಸು ನಿತ್ಯ ಕಾಣುತ್ತ
ನೆ ರೆಗೆ ಕೊಚ್ಚಿಹೋದ ತರಗೆಲೆಯಂತಾಗದಿರು.

ನೇ ಹ ಪ್ರೀತಿ ಬಾಂಧವ್ಯಗಳ ಬೆಲೆಯನರಿಯದೆ
ನೈ ಚ್ಯ ಬುದ್ಧಿಯ ಜಗದೆದುರು ತೋರಿಸದಿರು
ನೊ ಗವೊರದ ಮಗನಾಗಿ ತಾಯ್ತಂದೆಯರಿಗೆ
ನೋ ವುಗಳ ನೀಡಿ ವೃದ್ಧಾಶ್ರಮಕ್ಕೆ ಅಟ್ಟದಿರು.

ನೌ ಟಂಕಿ ಆಟವಾಡುತ ಮಂಕುಬೂದಿ ಎರಚಿ
ನಂ ಬಿದವರ ಬದುಕು ಮೂರಾಬಟ್ಟೆ ಮಾಡದಿರು
ನಃ ಬಾಳು ಆರು ಮೂರಡಿಯ ಮಣ್ಣಪಾಲೆಂದು
ನೀನೆಲ್ಲಾ , ನಿಂದೆಲ್ಲವೆಂದು ಅರಿತು ಬಾಳುತಿರು.


ಹೆಚ್. ಶಿವಮೂರ್ತಿ
ಕನ್ನಡ ಶಿಕ್ಷಕರು, ದಾವಣಗೆರೆ.
shivamurthyh2012@gmail.com

error: Content is protected !!