ನಾವು ಮತ್ತು ದೇವರು

ಮಾನವನ ಮನಸು ಹೃದಯ
ಚಿನ್ನವಾಗಿತ್ತು ಅಂದು !

ದೇವರು ಚಿನ್ನವಾಗುತ್ತಿದ್ದಾನೆ
ಇಂದು !  

ಪ್ರೀತಿ ಕರುಣೆ ತುಂಬಿದ
ಮಾನವನ ಹೃದಯ ಇಂದು ಕಲ್ಲಾಗುತ್ತಿದೆ.

ಮಾನವೀಯ ಸಂಬಂಧ ದೂರವಾಗುತ್ತಿದೆ
ಮಾನವ ಹೃದಯವೇ ಧರ್ಮಪೀಠ !
ಈಗ ಆಗುತ್ತಲಿವೆ ನೂರಾರು ಪೀಠ !  

ಮಾನವ ಜಾತಿ ಒಂದೇ ಅಂದು !
ಸಾವಿರಾರು ಜಾತಿಗಳ  ಪಂಗಡ ಇಂದು !  

ನಾವು ನಮ್ಮ ದೇವರು ಏನಾಗುತ್ತಿದೆ ಇಂದು !
ನಡೆಯುತ್ತಲೇ ಇದೆ ಸಂಘರ್ಷವಿಂದು !  

ವಾಸ್ತವ ಬದುಕಿನಲಿ ಏನೆಲ್ಲಾ ಬದಲಾವಣೆ
ದೇವರಿಗೆ ಲಂಚ ನೀಡುವ ಭಕ್ತರ ದೊಡ್ಡ ಹಿಂಡು ! 

ದೇವರು ನಗುತಿಹನು
ಕಲಿಯುಗದ ಕರ್ಮವನು ಕಂಡು !
ಮನುಜನ ಆಟವ ನೋಡಿ
ಬಾಳಿನ ವ್ಯರ್ಥವ ಕಂಡು !  

ಬಾಳಿನ ಬೆಳಗು ಆತ್ಮದ ಅರಿವು
ಅರಿಯುತ್ತಿಲ್ಲ ಮನುಜ
ಮಾಡುತ್ತಿದ್ದಾನೆ ಬಾಳು ವ್ಯರ್ಥ ! 

ಭಕ್ತಿ-ಜ್ಞಾನ-ಕರ್ಮ ಮರೆಯಾಗಿ
ಶಕ್ತಿ-ಯುಕ್ತಿ ಸೆರೆಯಾಗಿ
ಓಟಕ್ಕೆ ವಿರಾಮವಿಲ್ಲ
ಓಡುತ್ತಿದೆ ಮಾನವನ ಬದುಕು…!


ನಾವು ಮತ್ತು ದೇವರು - Janathavaniಜೆಂಬಿಗಿ ಮೃತ್ಯುಂಜಯ
ದಾವಣಗೆರೆ.

error: Content is protected !!