ಹೇಗೆ ವರ್ಣಿಸಲಿ ನಾ ನನ್ನ ಕರುನಾಡನ್ನ
ಅದೆಷ್ಟು ಸುಂದರ
ಪಶ್ಚಿಮ ಘಟ್ಟದ ದಾರಿಯಲಿ
ಕಾಣುತಿಹ ನೀ ನಿಜ ಸ್ವರ್ಗವಾ
ಕಾವೇರಿ, ತುಂಗೆ, ಭದ್ರೆ ಇನ್ನೂ
ಅನೇಕ ನದಿಗಳು ಉದ್ಭವಿಸುವ ಮೂಲವಿದು
ಹೇಗೆ ವರ್ಣಿಸಲಿ ನಾ
ನನ್ನ ಕರುನಾಡನ್ನ
ಶಾಸನ ಬದ್ದವಾದ ಭಾಷೆ ನಮ್ಮದು
ಸಿರಿಸಂಪತ್ತು ನಾಡು ನಮ್ಮದು
ಕವಿ ಸಾಹಿತಿಗಳ ತವರೂರಿದು
ಮೈಸೂರು ಅರಸರು ಆಳಿದ ನಾಡಿದು
ಮುತ್ತುರತ್ನಗಳನ್ನು ಬೀದಿಯಲಿ ಮಾರುತ್ತಿದ್ದ ಬೀಡಿದು
ಅನೇಕ ಶಿಲ್ಪಕಲೆಯುಳ್ಳ ಪುಣ್ಯ ಭೂಮಿಯಿದು
ಹೇಗೆ ವರ್ಣಿಸಲಿ ನಾ
ನನ್ನ ಕರುನಾಡನ್ನ
ಬಸವಣ್ಣನವರಂತಹ ವಚನಕಾರರು
ಅಕ್ಕಮಹಾದೇವಿಯಂತಹ ಶಿವಶರಣೆ
ವಿಶ್ವೇಶ್ವರಯ್ಯನವರಂತಹ ಅಭಿಯಂತರರು
ಸಿ.ವಿ. ರಾಮನ್ ರಂತಹ ವಿಜ್ಞಾನಿಗಳು
ಕುವೆಂಪು, ದ.ರಾ. ಬೇಂದ್ರ, ಕಂಬಾರರಂತಹ ಕವಿಗಳು
ಡಾ.ರಾಜಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್‌ರಂತಹ ಮೇರುನಟರು
ಇನ್ನೂ ಅನೇಕ ಮಹಾನ್ ವ್ಯಕ್ತಿಗಳು ಹುಟ್ಟಿ ಬೆಳೆದಂತಹ ನಾಡಿದು
ಹೇಗೆ ವರ್ಣಿಸಲಿ ನಾ
ನನ್ನ ಕರುನಾಡನ್ನ.
ಮನುಸ್ವಾಮಿ ಹಿರೇಮಠ್
ಪ್ರಥಮ ಪಿಯುಸಿ
ಪುಷ್ಪಾ ಮಹಾಲಿಂಗಪ್ಪ ಕಾಲೇಜು, ದಾವಣಗೆರೆ.