ಹಲೋ ಅಂಕಲ್ ನೋಡಿದ್ರಾ! ಈ ಕೊರೊನಾ ಕಾಲದಲ್ಲೂ ನಮ್ಮ ಇಂಡಿಯಾದಲ್ಲಿ ಚುನಾವಣೆನಾ ಸಕ್ಸಸ್ ಫುಲ್ ಆಗಿ ಮಾಡಿದ್ದೇವೆ.
ಹೌದಪ್ಪಾ, ಇಂಡಿಯಾ ಈಸ್ ಗ್ರೇಟ್!
ನಮ್ಮ ದೇಶದ ಬಗ್ಗೆ ಹೆಮ್ಮೆ ಅನಿಸುತ್ತೆ. ರಾಜಕೀಯ, ಧಾರ್ಮಿಕ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಚಾಣಾಕ್ಷ ಮುಖಂಡರಿದ್ದಾರೆ. ಹೋರಾಟ, ಪ್ರತಿಭಟನೆಗಳಲ್ಲಿ ಜೋರಾಗಿ ಬಿಸಿ ಮೂಡಿಸುವ ಹೋರಾಟಗಾರರೂ ಇದ್ದಾರೆ. ಜನರೂ ಅಷ್ಟೇ. ಆಯಾ ಮುಖಂಡರ ಬೆಂಬಲಕ್ಕೆ ನಿಲ್ತಾರೆ.
ಸ್ವಲ್ಪ ಬಿಡಿಸಿ ಹೇಳ್ತಿಯಾ?
ಈಗಾ ದೊಡ್ಡ ದೊಡ್ಡ ಚುನಾವಣಾ Rallyಗಳಲ್ಲಿ ಮೋದಿ, ದೀದಿ, ರಾಹುಲ್ ಗಾಂಧೀ ಮುಂತಾದ ಮುಖಂಡರು ಬಿಂದಾಸ್ ಭಾಗವಹಿಸುತ್ತಾರೆ. ಜನ ಕೊರೊನಾಗೆ ಕೇರ್ ಮಾಡದೇ ಲಕ್ಷಗಟ್ಟಲೇ ಸೇರುತ್ತಾರೆ. ಅದೇ ರೀತಿ ಮೊನ್ನೆ ನಡೆದ ಉಪಚುನಾವಣೆಯಲ್ಲಿ ನಮ್ಮ ರಾಜ್ಯದ ಕಮಲದ, ತೆನೆಹೊತ್ತ ಮತ್ತು ಕೈ ಮುಖಂಡರು ಪ್ರಚಾರದಲ್ಲಿ ತೊಡಗಿ ಕಿಕ್ಕಿರಿದು ಗುಂಪುಗಟ್ಟಿದ ಜನರಿಂದ ಜೈ ಅನ್ನಿಸಿಕೊಂಡರು.
ಬೇರೆ ಕ್ಷೇತ್ರಗಳಲ್ಲಿ?
ಅಲ್ಲಿಯೂ ನಮ್ಮ ಜನ ಕೊರೊನಾಗೆ ಡೋಂಟ್ ಕೇರ್. ಲಕ್ಷಗಟ್ಟಲೇ ಸೇರಿ ಕುಂಭ ಮೇಳ ಮಾಡಿದಾರೆ. ಜಾತ್ರೆಗಳನ್ನು ಪಾಲ್ಗೊಂಡಿದಾರೆ. ನಮ್ಮ ರೈತರು ರಾಷ್ಟ್ರಾದ್ಯಂತ ದೊಡ್ಡ ದೊಡ್ಡ ಪ್ರತಿಭಟನೆ ಮಾಡಿದಾರೆ. ಕೆಲವು ಬೇಡಿಕೆಗಳಿಗೆ ಪಾದಯಾತ್ರೆಗಳು ನಡೆದಿವೆ, ಸರ್ಕಾರಿ ನೌಕರರ ಪ್ರತಿಭಟನೆಗಳು ನಡೆದಿವೆ. ಕೆಲ ಸಿನಿಮಾ ಪ್ರಚಾರಗಳೂ ಜೋರಾಗಿ ನಡೆದವು. ನಮ್ಮ ಮದುವೆಗಳು ವಿಜೃಂಭಣೆಯಿಂದ ಆಗಿದಾವೆ. ಯಾವುದೇ ವಿಷಯವಿರಲಿ ನಮ್ಮ ಪಬ್ಲಿಕ್ ಅಂತೂ ಹೆದರಿಕೆಯಿಲ್ಲದೇ ಸೇರ್ತಾರೆ, ಕೂಗಾಡ್ತಾರೆ, ಕೇಕೆ ಆಗ್ತಾರೆ, ಸಂತೆ ಮಾಡ್ತಾರೆ. ಕೊರೊನಾ ಕೇಕೆಗೆ ಹೆದರದೇ ಮುನ್ನುಗ್ಗುವ ನಮ್ಮ ಜನರ ಬಗ್ಗೆ ಹೆಮ್ಮೆ ಅನಿಸುತ್ತೆ. India is great! ಏನಂತೀರಿ?
ಹೌದಪಾ. ಮೋದಿ, ದೀದಿ, ರಾಹುಲ್ ಗಾಂಧೀ ಮುಂತಾದ ಮುಖಂಡರು, ವಿವಿಧ ಮಠಾಧೀಶರು, ಪ್ರತಿಭಟನಾಕಾರರು ಜೈ ಎನ್ನುವ ಜನ ಜಂಗುಳಿ. ಒಟ್ಟಾರೆಯಾಗಿ ನಮೋ ಜೊತೆಗೆ ನಮ್ಮನ್ನೂ ಸೇರಿ ಒಂದು ಮಾರ್ಮಿಕವಾದ ಮಾತು ನೆನಪಾಗ್ತಿದೆ.
ಯಾವುದು?
ರೋಮ್ ಹೊತ್ತಿ ಉರಿಯುವಾಗ….ನೀರೊ ಪಿಟೀಲು ಬಾರಿಸುತ್ತಿದ್ದ!!!